ವಿಡಿಯೋ
ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಬಿಆರ್ ಪಾಟೀಲ್ ತಮ್ಮ ಆಪ್ತರ ಜೊತೆ ಫೋನ್ ನಲ್ಲಿ ಮಾತಾಡಿದ್ದಾರೆ. ಈ ವಿಡಿಯೋ ಕೂಡ ಚರ್ಚೆಗೆ ಕಾರಣ ಆಗಿದೆ.
ಫೋನ್ನಲ್ಲಿ ಆಪ್ತರ ಜೊತೆ ಮಾತಾಡ್ತಿದ್ದ ಶಾಸಕ ಬಿಆರ್ ಪಾಟೀಲ್ ಅವರು, ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಮುಖ್ಯಮಂತ್ರಿಯೂ ಆಗಿಬಿಟ್ಟ ಎಂದಿದ್ದಾರೆ.
ಅಲ್ಲದೇ ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಅವರನ್ನ ಮೊದಲು ಭೇಟಿ ಮಾಡಿಸಿದವನು ನಾನೇ. ಅವನ ಗ್ರಹಚಾರ ಚೆನ್ನಾಗಿತ್ತು ಸಿಎಂ ಆದ.
ಇದು ನನ್ನ ಗ್ರಹಚಾರ ಎಂದು ಪರೋಕ್ಷವಾಗಿ ಬಿಆರ್ ಪಾಟೀಲ್ ಬೇಸರ ಹೊರಹಾಕಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement