ವಿಡಿಯೋ
ಟ್ರಿನಿಡಾಡ್- ಟೊಬಾಗೋಗೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್ ಅವರನ್ನು "ಬಿಹಾರ ಕಿ ಬೇಟಿ" (ಬಿಹಾರದ ಮಗಳು) ಎಂದು ಕರೆದಿದ್ದಾರೆ.
ಅಲ್ಲಿನ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ದೇಶದ ಪ್ರಧಾನಿಯವರ ಪೂರ್ವಜರು ಬಿಹಾರದ ಬಕ್ಸಾರ್‌ನವರು ಎಂಬ ವಿಷಯವನ್ನು ತಿಳಿಸಿದರು.
ನಾವು ಕೇವಲ ರಕ್ತಸಂಬಂಧ ಅಥವಾ ಉಪನಾಮದಿಂದ ಸಂಪರ್ಕ ಹೊಂದಿಲ್ಲ, ನಮ್ಮ ಪೂರ್ವಜರ ಮೂಲಕ ನಾವು ಸಂಬಂಧಿಕರಾಗಿದ್ದೇವೆ.
ಭಾರತವು ನಿಮ್ಮನ್ನು ಎದುರು ನೋಡುತ್ತದೆ ಮತ್ತು ಸ್ವಾಗತಿಸುತ್ತದೆ. ಪ್ರಧಾನಿ ಕಮಲಾ ಅವರ ಪೂರ್ವಜರು ಬಿಹಾರದ ಬಕ್ಸಾರ್‌ನವರು. ಅವರು ಕೂಡ ಆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಜನರು ಅವರನ್ನು ಬಿಹಾರದ ಪುತ್ರಿ ಎಂದು ಪರಿಗಣಿಸುತ್ತಾರೆ ಎಂದು ಮೋದಿ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement