ವಿಡಿಯೋ
ಮಹಾರಾಷ್ಟ್ರದಲ್ಲಿ ಹಿಂದಿ-ಮರಾಠಿ ಭಾಷಾ ವಿವಾದ ತೀವ್ರ ಸ್ವರೂಪ ಪಡೆಯುತ್ತಿದೆ.
'ಅವರು ಮರಾಠಿ ಮಾತನಾಡದ "ಬಡ ಜನರನ್ನು" ಮಾತ್ರ ಹೊಡೆಯುತ್ತಾರೆ ಎಂದು ಗುರುವಾರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಸುದ್ದಿಗಾರರೊಂದಿಗೆ ಮಾತನಾಡಿದ ದುಬೆ, "ನೀವು ಬಡವರನ್ನು ಹೊಡೆಯುತ್ತೀರಿ. ಆದರೆ ಮುಖೇಶ್ ಅಂಬಾನಿ ಮುಂಬೈನಲ್ಲಿ ವಾಸಿಸುತ್ತಿದ್ದರೂ ಅವರು ಮರಾಠಿ ಮಾತನಾಡುವುದು ತುಂಬಾ ಕಡಿಮೆ.
ನಿಮಗೆ ಧೈರ್ಯವಿದ್ದರೆ ಅವರ ಬಳಿಗೆ ಹೋಗಿ, ಅವರ ಮೇಲೆ ಹಲ್ಲೆಗೆ ಯತ್ನಿಸಿ. ಮಹಿಮ್ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ.
ನಿಮಗೆ ಧೈರ್ಯವಿದ್ದರೆ, ಅಲ್ಲಿಗೆ ಹೋಗಿ. ಎಸ್‌ಬಿಐ ಅಧ್ಯಕ್ಷರು ಮರಾಠಿ ಮಾತನಾಡುವುದಿಲ್ಲ, ಅವರನ್ನು ಹೊಡೆಯಲು ಯತ್ನಿಸಿ" ಎಂದು ಸವಾಲು ಹಾಕಿದರು. ವಿಡಿಯೋ ಇಲ್ಲಿದೆ ನೋಡಿ.
Advertisement