ವಿಡಿಯೋ
ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆಯನ್ನು ವಿವರಿಸಲು ವಿದೇಶಕ್ಕೆ ತೆರಳಿರುವ ಸರ್ವ ಪಕ್ಷ ನಿಯೋಗ ವಿದೇಶ ಪ್ರವಾಸದಲ್ಲಿದೆ.
ನಿಯೋಗದ ಭಾಗವಾಗಿರುವ ಡಿಎಂಕೆ ಸಂಸದೆ ಕನಿಮೋಳಿ ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ಸೋಮವಾರ ಭಾರತದ ರಾಷ್ಟ್ರೀಯ ಭಾಷೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
"ಭಾರತದ ರಾಷ್ಟ್ರೀಯ ಭಾಷೆ ಏಕತೆ ಮತ್ತು ವೈವಿಧ್ಯತೆಯಾಗಿದೆ.
ಈ ನಿಯೋಗವು ಜಗತ್ತಿಗೆ ತರುವ ಸಂದೇಶ ಅದು, ಮತ್ತು ಅದು ಇಂದಿನ ಅತ್ಯಂತ ಮುಖ್ಯವಾದ ವಿಷಯ" ಎಂದು ಕನಿಮೋಳಿ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement