ವಿಡಿಯೋ
ಹನಿಟ್ರ್ಯಾಪ್ ಯತ್ನ ಆರೋಪದ ಬಗ್ಗೆ ತನಿಖೆ ನಡೆಸಲು ಸಚಿವ ಕೆ. ಎನ್. ರಾಜಣ್ಣ ಅವರು ಇನ್ನೂ ದೂರು ದಾಖಲಿಸಿಲ್ಲ ಎಂಗು ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ವಿರೋಧ ಪಕ್ಷದ ನಾಯಕ ಆರ್ ಅಶೋಕ ತಮ್ಮ ಫೋನ್ ಟ್ಯಾಪ್ ಅಗುತ್ತಿರುವ ಬಗ್ಗೆ ದೂರಿರುವುದನ್ನು ಕೇಳಿಸಿಕೊಂಡಿದ್ದೇನೆ, ಆದರೆ ಅವರಾಗಲೀ ಅವರು ಪಕ್ಷದ ಸದಸ್ಯರಾಗಲೀ ದೂರು ಸಲ್ಲಿಸಿಲ್ಲ ಎಂದು ಹೇಳಿದರು.
ಆರೋಪ ಮಾಡಿದವರು ದೂರು ನೀಡಬೇಕು. ನಂತರ ತನಿಖೆ ನಡೆಸಲಾಗುವುದು. ನೀವು ಎಷ್ಟು ಬಾರಿ ಕೇಳಿದರೂ ಇದು ನನ್ನ ಪ್ರತಿಕ್ರಿಯೆ ಹೀಗೆಯೇ ಇರುತ್ತದೆ ಎಂದು ತಿಳಿಸಿದರು.
Advertisement