ಪಾಕಿಸ್ತಾನದ ವಿರುದ್ದ ರಾಜತಾಂತ್ರಿಕ ದಾಳಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ತಲಾ 5 ಸಂಸದರನ್ನು ಒಳಗೊಂಡ 5-6 ಸಂಸದರ ನೇತೃತ್ವದ ನಿಯೋಗವೊಂದನ್ನು ವಿವಿಧ ದೇಶಗಳಿಗೆ ಕಳಿಸಲು ನಿರ್ಧರಿಸಿದೆ.
ಈ ನಿಯೋಗದಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸ್ಥಾನ ಪಡೆದಿದ್ದಾರೆ.
ಈ ಬಗ್ಗೆ ಮಾತನಾಡಿದ ಶಶಿ ತರೂರ್, ಐದು ಪ್ರಮುಖ ರಾಜಧಾನಿಗಳಿಗೆ ಸರ್ವಪಕ್ಷ ನಿಯೋಗವನ್ನು ಮುನ್ನಡೆಸಲು ಭಾರತ ಸರ್ಕಾರದಿಂದ ಆಹ್ವಾನ ಬಂದಿರುವುದು ನನಗೆ ಗೌರವ ತಂದಿದೆ.
ಸರ್ಕಾರ ತೆಗೆದುಕೊಂಡ ನಿರ್ಧಾರದಲ್ಲಿ ರಾಷ್ಟ್ರದ ಹಿತಾಸಕ್ತಿ ಇರುವಾಗ, ಅದರಲ್ಲಿ ನನ್ನ ಸೇವೆ ಅಗತ್ಯವಿರುವಾಗ ಅದರಲ್ಲಿ ಲೋಪಗಳನ್ನು ಹುಡುಕುವುದಿಲ್ಲ. ಜೈ ಹಿಂದ್ ಎಂದು ತಿಳಿಸಿದ್ದಾರೆ.
ನಿಯೋಗದ ಸದಸ್ಯನಾಗಿ ಹೆಸರಿಸಲ್ಪಟ್ಟ ಬಗ್ಗೆ, AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ "...ಇದು ಯಾವುದೇ ಪಕ್ಷದ ಸಂಬಂಧದ ಬಗ್ಗೆ ಅಲ್ಲ...
ಇದು ಒಂದು ಪ್ರಮುಖ ಕಾರ್ಯ. ಈ ಜವಾಬ್ದಾರಿಯನ್ನು ಚೆನ್ನಾಗಿ ಪೂರೈಸಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ." ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement