Watch | 'ಪ್ರೀತಿಯಿಂದ ಹೇಳಿದ್ದೇನೆ'; ಭಾಷೆ ಬಗ್ಗೆ ಮಾತನಾಡಲು ರಾಜಕಾರಣಿಗಳು ಅರ್ಹರಲ್ಲ!

ಕನ್ನಡ ತಮಿಳಿನಿಂದ ಹುಟ್ಟಿಕೊಂಡಿದೆ ಎಂಬ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ತುತ್ತಾಗಿರುವ ನಟ ಕಮಲ್ ಹಾಸನ್ ಬುಧವಾರ ವಿವಾದದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಹೇಳಿಕೆಯನ್ನು 'ಪ್ರೀತಿಯಿಂದ ಹೇಳಿದ್ದೇನೆ': ಎಂದು ವಿವರಿಸಿದ ಕಮಲ್ ಹಾಸನ್ ಮತ್ತು ರಾಜಕಾರಣಿಗಳು ಅಂತಹ ಚರ್ಚೆಗಳನ್ನು ಭಾಷಾ ತಜ್ಞರಿಗೆ ಬಿಡಬೇಕು ಎಂದು ಹೇಳಿದರು.

ಕೇರಳದ ತಿರುವನಂತಪುರಂನಲ್ಲಿ ಮಾತನಾಡಿದ ಅವರು, ತಮ್ಮ ಸ್ಪಷ್ಟೀಕರಣವನ್ನು ವಿವರಣೆ ಎಂದು ಕರೆದಿದ್ದು, ಉತ್ತರ ಅಲ್ಲ ಎಂದಿದ್ದಾರೆ.

'ಥಗ್ ಲೈಫ್' ಬ್ಯಾನ್ ಕುರಿತ ಕರೆಗೆ ಪ್ರತಿಕ್ರಿಯಿಸಿದ ಕಮಲ್ ಹಾಸನ್, ಕರ್ನಾಟಕದ ಜನರು ನನ್ನನ್ನು ಮತ್ತು ನನ್ನ ಸಿನಿಮಾ ನೋಡಿಕೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು. ವಿಡಿಯೋ ಇಲ್ಲಿದೆ ನೋಡಿ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com