ವಿಡಿಯೋ
ಶಬರಿಮಲೆ ದೇವಸ್ಥಾನ ತೆರೆದ 48 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಭಾರೀ ಜನದಟ್ಟಣೆ ಉಂಟಾಗಿದೆ.
ಇದು ಅಲ್ಲಿನ ಅಧಿಕಾರಿಗಳಿಗೆಅನಿರೀಕ್ಷಿತ ಎನ್ನಲಾಗಿದ್ದು, ಜನಸಂದಣಿ ನಿರ್ವಹಣಾ ವ್ಯವಸ್ಥೆ ಯಾವುದಕ್ಕೂ ಸಾಲದಂತಾಗಿದೆ.
ಮಂಗಳವಾರ ಆಹಾರ ಅಥವಾ ನೀರಿಲ್ಲದೆ ಯಾತ್ರಿಕರು 10 ಗಂಟೆಗಳಿಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತರು. ಅವರಲ್ಲಿ ಹಲವರು ಬಳಲಿಕೆಯಿಂದ ಕುಸಿದು ಬಿದ್ದಿದ್ದಾರೆ.
ಮೊದಲ 48 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಸನ್ನಿಧಾನವನ್ನು ತಲುಪಿದರು. ವಿಡಿಯೋ ಇಲ್ಲಿದೆ ನೋಡಿ.
Advertisement