ವಿಡಿಯೋ
ಬೆಂಗಳೂರು ನಗರದಲ್ಲಿ ಕಂಡಕಂಡಲ್ಲಿ ಕಸ, ತ್ಯಾಜ್ಯ ಎಸೆಯುವುದು, ಖಾಲಿ ಸೈಟ್ ಗಳಲ್ಲಿ ಅಕ್ಕಪಕ್ಕದ ಮನೆಯವರು ತಂದು ಕಸ ಸುರಿಯುವುದು ಇತ್ಯಾದಿ ಸಮಸ್ಯೆ ಮಿತಿಮೀರಿದೆ.
ಹೀಗೆ ಕಸ ಎಸೆಯುವವರ ಮೇಲೆ ಹದ್ದಿನ ಕಣ್ಣಿಟ್ಟು ಕಠಿಣ ಕ್ರಮಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ.
GBA ಮಾರ್ಷಲ್ಗಳು ನಿನ್ನೆ ಗುರುವಾರ ಕಸ ಸುರಿಯುವ ಹಬ್ಬ ಎಂಬ ಕಾರ್ಯಾಚರಣೆಯನ್ನೇ ಆರಂಭಿಸಿದ್ದಾರೆ.
ನಿನ್ನೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ 218 ಮನೆಗಳ ಮುಂದೆ ಕಸ ಸುರಿದಿದ್ದು, 2.80 ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.
Advertisement