ವಿಡಿಯೋ
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಲಾಗುತ್ತಿರುವ ಧರ್ಮಸ್ಥಳ ಪ್ರಕರಣದಲ್ಲಿ ನೈರ್ಮಲ್ಯ ಕಾರ್ಮಿಕ ಸಿ ಎನ್ ಚಿನ್ನಯ್ಯ ಕುಟುಂಬಕ್ಕೆ ಅಧಿಕಾರಿಗಳು ರಕ್ಷಣೆ ನೀಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ ಮಂಗಳವಾರ ಹೇಳಿದ್ದಾರೆ.
ಚಿನ್ನಯ್ಯ ಅವರ ಪತ್ನಿ ತಮ್ಮ ಜೀವಕ್ಕೆ ಅಪಾಯವಿದೆ ಮತ್ತು ಅವರಿಗೆ ರಕ್ಷಣೆ ಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದರು.
ಈ ಸಂಬಂಧ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, "ಅಂತಹದ್ದೇನಾದರೂ ಕಂಡುಬಂದರೆ, ಧರ್ಮಸ್ಥಳದಲ್ಲಿ ದೊಡ್ಡ ತನಿಖೆ ನಡೆಯುತ್ತಿರುವುದರಿಂದ ನಾವು ಅವರಿಗೆ ರಕ್ಷಣೆ ನೀಡುತ್ತೇವೆ.
ಸತ್ಯವನ್ನು ಹೊರತರುವಲ್ಲಿ ಯಾರಾದರೂ ಸಮಸ್ಯೆ ಎದುರಿಸಿದರೆ, ನಾವು ಅವರನ್ನು ಖಂಡಿತವಾಗಿಯೂ ರಕ್ಷಿಸುತ್ತೇವೆ" ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement