ವಿಡಿಯೋ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು “ನರಕಕೂಪ”ವೆಂದು ಉಲ್ಲೇಖಿಸಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಈ ಹೇಳಿಕೆಗೆ ಭಾರತ ಸರ್ಕಾರ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, “ಅಜ್ಞಾನಪೂರ್ಣ ಹೇಳಿಕೆ” ಎಂದು ಖಂಡಿಸಿದೆ.
ಈ ವಿವಾದಕ್ಕೆ ಕಾರಣವಾದದ್ದು ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡ ಅಮೆರಿಕದ ಪ್ರಮುಖ ಸಂಪ್ರದಾಯವಾದಿ ಲೇಖಕ ಮತ್ತು ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್.
ಅದರಲ್ಲಿ ಭಾರತ ಸೇರಿದಂತೆ ಕೆಲವು ದೇಶಗಳನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು.
ಜೊತೆಗೆ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ತೀವ್ರ ಟೀಕೆಗಳನ್ನು ಮಾಡಲಾಗಿತ್ತು. ವಿಡಿಯೋ ಇಲ್ಲಿದೆ ನೋಡಿ.
Advertisement