Watch | ಎಥೆನಾಲ್ ಮಿಶ್ರಿತ ಪೆಟ್ರೋಲ್ ತಡೆಗೆ ನೀಟ್ ಸೋರಿಕೆಗಿಂತ ದೊಡ್ಡ ಪ್ರತಿಭಟನೆ ಬೇಕು!

E20 ಇಂಧನದ ವಿರುದ್ಧದ 2.30 ಲಕ್ಷಕ್ಕೂ ಹೆಚ್ಚು ಮನವಿಗಳನ್ನು ಸಲ್ಲಿಸಲು, ಸುಮಾರು 100 ಜನರೊಂದಿಗೆ ಪ್ರಧಾನ ಮಂತ್ರಿಯವರ ನಿವಾಸದತ್ತ ಕೇಜ್ರಿವಾಲ್ ಮೆರವಣಿಗೆ ಹೊರಟಿದ್ದರು.

ಕೇಜ್ರಿವಾಲ್ ಮತ್ತು ಪಕ್ಷದ ಇತರ ನಾಯಕರನ್ನು ದೆಹಲಿ ಪೊಲೀಸರು ಮಂಗಳವಾರ ತಡೆದರು; ಇದರಿಂದಾಗಿ ಅವರು ಫಿರೋಜ್ ಶಾ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಶೇ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆ ವಿರುದ್ಧ ತಮ್ಮ ಪಕ್ಷದ ಅಭಿಯಾನ ಮುಂದುವರಿಯಲಿದೆ.

E20 ವಿಷಯವು ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಪ್ರಭಾವದಿಂದ ಆರಂಭವಾಗಿರುವುದರಿಂದ, ದೇಶವು NEET ಪ್ರಶ್ನೆಪತ್ರಿಕೆ ಸೋರಿಕೆಗಿಂತ ದೊಡ್ಡ ಪ್ರತಿಭಟನೆ ನಡೆಸಬೇಕಾಗಿದೆ.

ಇದನ್ನು ತಡೆಯಲು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com