ವಿಡಿಯೋ
ಬೆಂಗಳೂರು ಮೆಟ್ರೋ ಪ್ರಸ್ತಾವಿತ ದರ ಏರಿಕೆಯನ್ನು ತಡೆಹಿಡಿಯುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೋಮವಾರ ಹೇಳಿದ್ದಾರೆ.
ದರ ಪರಿಷ್ಕರಣೆಯ ಆಧಾರವನ್ನು ವಿವರಿಸಿದ ಶಿವಕುಮಾರ್, ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಕಾರ್ಯಾಚರಣೆ, ನಿರ್ವಹಣೆ ಮತ್ತು ದುರಸ್ತಿ (ಒಎಂಆರ್) ವೆಚ್ಚಗಳು, ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ-ಸಂಬಂಧಿತ ವೆಚ್ಚಗಳು ಮತ್ತು ಇಂಧನ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳುವ ಸ್ಥಿರ ಸೂತ್ರವನ್ನು ಅನುಸರಿಸುತ್ತದೆ.
ಈ ನಿಯತಾಂಕಗಳನ್ನು ಆಧರಿಸಿ, ನಾನು ಬಿಎಂಆರ್‌ಸಿಎಲ್‌ಗೆ ಮರು ಲೆಕ್ಕಾಚಾರ ಮಾಡಿ ಪರಿಷ್ಕೃತ ದರವನ್ನು ತರಲು ನಿರ್ದೇಶಿಸಿದ್ದೇನೆ ಎಂದು ಡಿಸಿಎಂ ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.
Advertisement