ವಿಡಿಯೋ
ನೀವು ಈ ಜಿರಳೆಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡ್ತೀವಿ ಅಂತಾ ಹೇಳಿ ವಾಂತಿ ಮಾಡ್ತಿದ್ದೀರಾ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಶುಕ್ರವಾರ ಲೇವಡಿ ಮಾಡಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ನೀಟ್ ಪರೀಕ್ಷೆ ಸಂಬಂಧಿತ ಪ್ರತಿಭಟನೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು.
ಮೋದಿ ಅವರು ಯಾರಿಗೂ ಸಲಾಂ ಹೊಡೆಯುತ್ತಿಲ್ಲ. ಅಮೆರಿಕಾದ ಏಕಸ್ವಾಮ್ಯತೆಗೆ ಸೆಡ್ದು ಹೊಡಿತಿದ್ದಾರೆ. ಅಂತ ಮೋದಿ ಅವರನ್ನು ಬಗ್ಗು ಬಡಿಯಬೇಕು ಎಂದು ಯೋಚನೆ ಮಾಡುತ್ತಿದ್ದಾರೆ.
ದೇಶದ ಜನ ಮೋದಿ ಬೆನ್ನಿಗೆ ಇದ್ದಾರೆ. ನೀವು ಈ ಜಿರಳೆಗಳನ್ನು ಇಟ್ಟುಕೊಂಡು ಕ್ರಾಂತಿ ಮಾಡ್ತೀವಿ ಅಂತಾ ಹೇಳಿ ವಾಂತಿ ಮಾಡ್ತಿದ್ದೀರ, ಅವರನ್ನು ಯಾವ ರೀತಿ ಮಟ್ಟ ಹಾಕಬೇಕು ಎಂಬುದು ಮೋದಿ ಅವರಿಗೆ ಗೊತ್ತಿದೆ ಎಂದಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.