ವಿಡಿಯೋ
2026ರ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಭಾರತದ ಪ್ಯಾರಾ ಅಥ್ಲೀಟ್, ಕನ್ನಡತಿ ಶಿಲ್ಪಾ ಕೆ. ಶೈಲಾ ಅವರು ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾರೆ.
ಕಾಮನ್‌ವೆಲ್ತ್ ಗೇಮ್ಸ್‌ಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಶಿಲ್ಪಾ ಪಾತ್ರರಾಗಿದ್ದರು.
ಶಿಲ್ಪಾ ಅವರು 7.26 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ಆರಂಭದಲ್ಲಿ ಅವರು 4ನೇ ಸ್ಥಾನ ಪಡೆದಿದ್ದರು.
ಮೂರನೇ ಸ್ಥಾನದಲ್ಲಿದ್ದ ನೈಜೀರಿಯಾದ ಕ್ರೀಡಾಪಟು ಯುಚಾರಿಯಾ ಇಯಾಜಿ ಅವರ ಎಸೆತವು ಫೌಲ್ ಎಂದು ಭಾರತ ಪ್ರತಿಭಟನೆ ದಾಖಲಿಸಿತು.
ಈ ಹಿನ್ನೆಲೆಯಲ್ಲಿ, ನೈಜೀರಿಯಾ ಅಥ್ಲೀಟ್ ಅನರ್ಹಗೊಂಡರು. ತದನಂತರ ಶಿಲ್ಪಾ ಅವರು ಮೂರನೇ ಸ್ಥಾನದೊಂದಿಗೆ ಕಂಚಿನ ಪದಕಕ್ಕೆ ಮುತ್ತಿಟ್ಟರು. ವಿಡಿಯೋ ಇಲ್ಲಿದೆ ನೋಡಿ.