ವಿಡಿಯೋ
ಎಲ್‌ಐಸಿ ವಿಮೆ ಹಣದ ಆಸೆಗಾಗಿ ಸ್ವಂತ ತಮ್ಮನನ್ನೇ ಅಣ್ಣ ತನ್ನ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿ, ಅಪಘಾತದಂತೆ ಬಿಂಬಿಸಲು ಯತ್ನಿಸಿದ್ದ ಪ್ರಕರಣವನ್ನು ಶಿರಾ ಪೊಲೀಸರು ಭೇದಿಸಿದ್ದಾರೆ.
ಈ ಪ್ರಕರಣ ಸಂಬಂಧ ಹನುಮಂತರಾಜು (40), ಲಕ್ಷ್ಮಿಕಾಂತ (31), ನವೀನ್‌ಕುಮಾರ್ (28) ಹಾಗೂ ಎಂ.ಡಿ. ಜಿಲಾನ್ (21) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ಕುರಿತು, ತುಮಕೂರು ಎಸ್ಪಿ ಅಶೋಕ್ ಕೆ. ವೆಂಕಟ್ ಬುಧವಾರ ಮಾಹಿತಿ ನೀಡಿದರು.
ಅಲ್ಲದೆ, ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಶಿರಾ ಮತ್ತು ಮಧುಗಿರಿ ಪೊಲೀಸ್ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿ, ಪ್ರಶಂಶನಾ ಪತ್ರ ನೀಡಿ ಅಭಿನಂದಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.