ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣ ದಿನಕ್ಕೊಂದು ರೀತಿಯಲ್ಲಿ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.
ದೆಹಲಿಯ ಕುಮಾರಸ್ವಾಮಿ ಸರ್ಕಾರಿ ನಿವಾಸದಲ್ಲಿ ಮೊಬೈಲ್ ಎಕ್ಸ್ ಚೇಂಜ್ ಆಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿಕೆ ನೀಡಿದ್ದರು.
ಈ ಬೆನ್ನಲ್ಲೇ HD ಕುಮಾರಸ್ವಾಮಿ ಸೋಮವಾರ 'ಕಾಲ್ ಡೀಟೇಲ್ ರೆಕಾರ್ಡ್' (CDR) ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಆರೋಪಿಯಾಗಿರುವ, ಅವರ ಮಾಜಿ ಚಾಲಕ ಕಾರ್ತಿಕ್, ಡಿಸಿಎಂ ಆಗಿದ್ದ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಜೆಡಿ(ಎಸ್) ಪ್ರಧಾನ ಕಚೇರಿ 'ಜೆಪಿ ಭವನ'ದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಕಾರ್ತಿಕ್ ಜೊತೆಗೆ ಡಿಕೆ ಶಿವಕುಮಾರ್ ಸಂಬಂಧ ಎಂತಹದ್ದು?
ಕಾರ್ತಿಕ್ ಜೊತೆಗಿನ ಶಿವಕುಮಾರ್ ಅವರ ಸಂಬಂಧದ ಬಗ್ಗೆ ಪ್ರಶ್ನಿಸಿದರು ಮತ್ತು ಈ ಭೇಟಿಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಸವಾಲು ಹಾಕಿದರು. ವಿಡಿಯೋ ಇಲ್ಲಿದೆ ನೋಡಿ.