ವಿಡಿಯೋ
ದೀಪಾವಳಿ ಹಬ್ಬಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಶುಭಾಶಯ ತಿಳಿಸಿದ್ದು ಇದೀಗ ವಿವಾದಕ್ಕೀಡಾಗಿದ್ದು, ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
ದೀಪಾವಳಿಯನ್ನು 'ಸಂತೋಷದ ಈದ್' (ಖುಷಿಯೋಂಕಿ ಈದ್) ಎಂದು ಖರ್ಗೆ ಬಣ್ಣಿಸಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡುವಾಗ ಖರ್ಗೆ, ದೀಪಾವಳಿಯು ದೇಶದ ಅತಿ ದೊಡ್ಡ ಖುಷಿಯ ಈದ್ ಆಗಿದ್ದು, ಇದನ್ನು ಸುದೀರ್ಘ ಕಾಲ ಆಚರಿಸಲಾಗುತ್ತದೆ ಎಂದು ಹೇಳಿದ್ದರು.
ಮಲ್ಲಿಕಾರ್ಜುನ ಖರ್ಗೆಯವರ ದೀಪಾವಳಿ ಶುಭಾಶಯ ಕುರಿತು ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದರು. ವಿಡಿಯೋ ಇಲ್ಲಿದೆ ನೋಡಿ.