ವಿಡಿಯೋ
ಇಂಡೋ-ಚೀನಾ ಗಡಿಯಲ್ಲಿ ಮತ್ತೆ ಭಾರತ-ಚೀನಾ ಸೈನಿಕರ ನಡುವೆ ತಿಕ್ಕಾಟ ಭುಗಿಲೆದಿದ್ದು, ಡೋಕ್ಲಾಂ, ಗಲ್ವಾನ್ ರೀತಿಯ ಸಂಘರ್ಷ ಏರ್ಪಡುತ್ತಿದೆ.
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಡಿಜಿ ಶತ್ರುಜೀತ್ ಕಪೂರ್ ಅವರು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಜೊತೆಗಿನ ಇತ್ತೀಚಿನ ಮುಖಾಮುಖಿ ಕುರಿತು ಹೇಳಿಕೆ ನೀಡಿದ್ದಾರೆ.
ಗುರುವಾರ ಅಲ್ವಾರ್ನಲ್ಲಿ ಹಿಮವೀರ್ಗಳೆಂದು ಕರೆಯಲಾಗುವ ಐಟಿಬಿಪಿ ಸಿಬ್ಬಂದಿಯನ್ನು ಉದ್ದೇಶಿಸಿ ಶತ್ರುಜೀತ್ ಕಪೂರ್ ಮಾತನಾಡಿದರು.
ಸಂಘರ್ಷದ ಸಂದರ್ಭದಲ್ಲಿ ಪಡೆಯ ಶೌರ್ಯ ಕಮಾಂಡೋ ತಂಡಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಕಪೂರ್ ಹೇಳಿದರು.
ಚೀನಾವನ್ನು ಎದುರಿಸುವುದು ಈಗ ಕಷ್ಟಕರ. ಏಕೆಂದರೆ, ಚೀನಾ ತನ್ನ ಸೇನಾ ಪಡೆಗಳ ಆಧುನೀಕರಣದಲ್ಲಿ ಭಾರಿ ಹೂಡಿಕೆ ಮಾಡಿದ್ದು, ಸಾಕಷ್ಟು ಮುನ್ನಡೆ ಸಾಧಿಸಿದೆ.
ಆದರೆ, ರಷ್ಯಾ-ಉಕ್ರೇನ್ ಮತ್ತು ಇರಾನ್-ಅಮೆರಿಕ ಸಂಘರ್ಷಗಳಲ್ಲಿ, ಡ್ರೋನ್ಗಳ ಮೂಲಕ ಸಣ್ಣ ರಾಷ್ಟ್ರಗಳು ದೊಡ್ಡ ರಾಷ್ಟ್ರಗಳ ವಿರುದ್ಧ ಹೋರಾಡಬಲ್ಲವು ಎಂದು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.