ವಿಡಿಯೋ
ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು ನನ್ನ ಮಾತಿನ ಅರಿವು ನನಗಿದೆ. ನಿಮ್ಮ ಮಾತಿನ ಹರಿವು ನಿಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಗೃಹ ಇಲಾಖೆಯನ್ನು ಯಾರಿಗೆ ನೀಡಬೇಕು ಅಥವಾ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂಬುದರ ಬಗ್ಗೆ ಕಾಂಗ್ರೆಸ್ ಪಕ್ಷವು ಇವರನ್ನು ಕೇಳಬೇಕೇ?
ಪ್ರಮಾಣಪತ್ರ ನೀಡಲು ಕುಮಾರಸ್ವಾಮಿ ಯಾರು? 'ನಿರುದ್ಯೋಗಿ ಸಚಿವ'ರೊಬ್ಬರ ಹೇಳಿಕೆಗೆ ನಾನು ಪ್ರತಿಕ್ರಿಯಿಸಬೇಕೆಂದು ನನಗೆ ಅನ್ನಿಸುವುದಿಲ್ಲ. ಎಂದು ಹೇಳಿದರು. ವಿಡಿಯೋ ಇಲ್ಲಿದೆ ನೋಡಿ.