ವಿಡಿಯೋ
ದೆಹಲಿಯ ಕಿಲೋಕಾರಿ ಗ್ರಾಮದ ಅಪಾರ್ಟ್‌ಮೆಂಟ್ ಹೊರಗೆ ಸೋಮವಾರ ಮದ್ಯಪಾನ ಮಾಡಿ ಕೂಗಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ 54 ವರ್ಷದ ಮಣಿಪುರಿ ಸಂಗೀತಗಾರನನ್ನು ಹತ್ಯೆ ಮಾಡಲಾಗಿದೆ.
ಡೆಲಿವರಿ ಕೆಲಸಗಾರರು ಮತ್ತು ಧಾಬಾ ಸಿಬ್ಬಂದಿಯ ಗುಂಪೊಂದು ಅವರ ಮೇಲೆ ಹಲ್ಲೆ ನಡೆಸಿದ ನಂತರ ಮಣಿಪುರಿ ಗಾಯಕ ವಿಕ್ರಮ್ ಸಿಂಗ್ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರ ಮೂಲದ ಸಿ ವಿಕ್ರಮ್ ಸಿಂಗ್ ಕಿಲೋಕಾರಿ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿದ್ದರು.
ಮೈಟೈ ಸಮುದಾಯಕ್ಕೆ ಸೇರಿದ ಸಿಂಗ್, ತನ್ನ ಮನೆಯ ಹೊರಗೆ ಪುರುಷರು ತೊಂದರೆ ನೀಡುತ್ತಿದುದನ್ನು ಆಕ್ಷೇಪಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ವಿಡಿಯೋ ಇಲ್ಲಿದೆ ನೋಡಿ.