ವಿಡಿಯೋ
ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ, ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
'ಆಪರೇಷನ್ ಸೋಹನ್'ನಲ್ಲಿ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಗೆ ಸೇರಿದವರೆಂದು ಶಂಕಿಸಲಾಗಿರುವ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದೆ.
ಉಗ್ರರನ್ನು ಆದಿಲ್ @ ಮುಸ್ತಫಾ ಮತ್ತು ಸದ್ದಾಂ ಎಂದು ಗುರುತಿಸಲಾಗಿದೆ.
ಮಜಲ್ತಾ ಪ್ರದೇಶದ ಬ್ರಟ್ಟಲ್, ಸೋಹನ್ ಮತ್ತು ಖುಬ್ಬಾನ್ ಭಾಗಗಳಲ್ಲಿ ಭಾರತೀಯ ಸೇನೆ, ಪೊಲೀಸರು ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜಂಟಿಯಾಗಿ ಕಾರ್ಯಾಚರಣೆ ನಡೆಸಿವೆ. ವಿಡಿಯೋ ಇಲ್ಲಿದೆ ನೋಡಿ.