ವಿಡಿಯೋ
ದುಬೈನಲ್ಲೇ ಕೆಲಸ ಮಾಡಿಕೊಂಡಿದ್ದ ಉಡುಪಿ ಮೂಲದ ಪ್ರಕಾಶ್ ಕುಂದರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪತ್ನಿಯೇ ಗಂಡನನ್ನ ಬರ್ಬರವಾಗಿ ಕೊಂದಿದ್ದಾಳೆ ಎಂಬ ಆರೋಪವಿದ್ದು ಘಟನೆ ಬಳಿಕ ಕುಂದರ್ ಪತ್ನಿ ಮತ್ತು ಅಪ್ರಾಪ್ತ ಮಗ ನಾಪತ್ತೆಯಾಗಿದ್ದಾರೆ.
ಕಳೆದ ಜುಲೈನಲ್ಲೇ ಶಾರ್ಜಾದಲ್ಲಿ ಪ್ರಕಾಶ್ ಕುಂದರ್ ಕೊಲೆಯಾಗಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಪ್ರಕಾಶ್ ಅವರ ಸಹೋದರ ಗುರುವಾರ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ, ಪ್ರಕರಣದ ಸಮಗ್ರ ತನಿಖೆಯನ್ನು ಕೋರಿದರು.
ಎಸ್‌ಪಿ ಅವರನ್ನು ಭೇಟಿಯಾದ ನಂತರ ಪ್ರಕಾಶ್ ಅವರ ಸಹೋದರ ಅನಿಲ್ ಪ್ರಶಾಂತ್ ಕುಂದರ್ ಮಾಧ್ಯಮಗಳೊಂದಿಗೆ ಮಾತನಾಡಿದರು. ವಿಡಿಯೋ ಇಲ್ಲಿದೆ ನೋಡಿ.