ವಿಡಿಯೋ
ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ಮಾಧ್ಯಮಗಳ ಜೊತೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸುರೇಶ್ ಕುಮಾರ್, ಜ್ಞಾನೇಶ್ ಕುಮಾರ್ ಬರುವ ಮುಂಚೆಯೂ ಕಾಂಗ್ರೆಸ್ ಸೋಲುತ್ತಿತ್ತು ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷವು ತಮ್ಮ ನಿರಂತರ ಸೋಲುಗಳಿಗೆ ಇಂತಹ ವಿಷಯಗಳನ್ನು ಮುನ್ನಲೆಗೆ ತಂದು ಯಾರನ್ನಾದರೂ ಹೊಣೆ ಮಾಡಲು ನೋಡುತ್ತಿದೆ.
ಆ ಕಾಂಗ್ರೆಸ್ ಹೋರಾಟದಲ್ಲಿ ಸತ್ಯವಿಲ್ಲ. 60 ವರ್ಷ ದೇಶಕ್ಕೆ ಸೇವೆ ಮಾಡಿದ ಕಾಂಗ್ರೆಸ್ ಗೆ ಇದು ಸೂಕ್ತವಲ್ಲ ಎಂದು ಸುರೇಶ್ ಕುಮಾರ್ ಕಿಡಿಕಾರಿದರು. ವಿಡಿಯೋ ಇಲ್ಲಿದೆ ನೋಡಿ.