ವಿಡಿಯೋ
ನೈಸ್ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ನೈಸ್ ಹಗರಣ 2ಜಿ ಸ್ಕ್ಯಾಮ್, ಕೋಲ್ ಸ್ಕ್ಯಾಮ್‌ಗಿಂತ ದೊಡ್ಡ ಹಗರಣ ಎಂದು ಆರೋಪಿಸಿದರು.
2003ರಲ್ಲಿ ಸಿಎಂ ಡಿಕೆಶಿ ಆಸ್ತಿ 4 ಕೋಟಿ ರೂ. ಇತ್ತು. ಆದರೆ 2023ರಲ್ಲಿ ಅದು 1,413 ಕೋಟಿ ರೂ. ಆಗಿದೆ ಎಂದು ಆರೋಪಿಸಿದ್ದರು.
ಕುಮಾರಸ್ವಾಮಿ ಆರೋಪಕ್ಕೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ?
ನನಗೆ ವ್ಯವಹಾರ, ವ್ಯಾಪರ ಮಾಡುವ ಶಕ್ತಿ ಇದೆ. ಅದಕ್ಕೆ ಅಧಿಕೃತವಾಗಿ ಆಸ್ತಿ ಘೋಷಿಸಿದ್ದೇನೆ, ಇವರ ಗೊಡ್ಡು ಬೆದರಿಕೆಗೆ ಹೆದರಲ್ಲ ಎಂದು ತಿರುಗೇಟು ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.