ಮನರಂಜನೆ
'ದಿಲ್ವಾಲೆ' ಟ್ರೇಲರ್ ಗೆ ಥ್ರಿಲ್ ಆದ ಅಭಿಮಾನಿಗಳು
ರೋಹಿತ್ ಶೆಟ್ಟಿ ನಿರ್ದೇಶನದ ದಿಲ್ವಾಲೆ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಒಂದೇ ದಿನದಲ್ಲಿ ೬೦ ಲಕ್ಷಕ್ಕೂ ಹೆಚ್ಚು ಜನ ಇದನ್ನು ವೀಕ್ಷಿಸಿದ್ದಾರೆ. ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಈ ಸಿನೆಮಾದಲ್ಲಿ ವರುಣ್ ಧವನ್ ಮತ್ತು ಕೃತಿ ಸನಾನ್ ಜೋಡಿ ಕೂಡ ಮುಖ್ಯ ಭೂಮಿಕೆಯಲ್ಲಿದೆ. ಎಕ್ಸಾಟಿಕ್ ಪ್ರದೇಶಗಳಲ್ಲಿ ಚಿತ್ರೀಕರಿಸಿರುವ ಈ ಸಿನೆಮಾದಲ್ಲಿ ಹೇರಳ ಆಕ್ಷನ್ ದೃಶ್ಯಗಳಿರುವ ಸುಳಿವನ್ನು ಟ್ರೇಲರ್ ಬಿಚ್ಚಿಟ್ಟಿದೆ. ಸಿನೆಮಾ ಡಿಸೆಂಬರ್ ೧೮ಕ್ಕೆ ಬಿಡುಗಡೆಯಾಗಲಿದೆ.