ಮನರಂಜನೆ
ದರ್ಶನ್ ಅಭಿನಯದ 'ಚಕ್ರವರ್ತಿ' ಟ್ರೇಲರ್ ವೈರಲ್
ಚೊಚ್ಚಲ ನಿರ್ದೇಶಕ ಚಿಂತನ್ ಅವರ 'ಚಕ್ರವರ್ತಿ' ಸಿನೆಮಾದ ಸಂಭಾಷಣೆ ರಹಿತ ಟ್ರೇಲರ್ ನೆನ್ನೆ ಯುಗಾದಿ ಹಬ್ಬಕ್ಕೆ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರತಿಕ್ರಿಯೆ ಸಿಕ್ಕಿದೆ. ದರ್ಶನ್, ದೀಪಾ ಸನ್ನಿಧಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾದ ೨೪ ಘಂಟೆಗಳಲ್ಲಿ ೯ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಂಡಿದೆ.
