ಸುದ್ದಿ
ವಿಡಿಯೋ: ದೆಹಲಿ ಪೊಲೀಸರಿಂದ ಯೋಗೇಂದ್ರ ಯಾದವ್ ಎಳೆದಾಟ-ಬಂಧನ
ದೆಹಲಿ ಪೊಲೀಸರು ಒಂದಲ್ಲ ಒಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಎಎಪಿ ಪಕ್ಷದ ಮಾಜಿ ಮುಖಂಡ ಹಾಗೂ ಸ್ವರಾಜ್ ಅಭಿಯಾನದ ರೂವಾರಿ ಯೋಗೆಂದ್ರ ಯಾದವ್ ಅವರು ವರದಿಗಾರರೊಂದಿಗೆ ಮಾತನಾಡುವಾಗ ಅವರ ಮೇಲೆ ಕೈಮಾಡಿ ಎಳೆದೊಯ್ದು ಬಂಧಿಸಿರುವುದು ಹಲವಾರು ನಾಗರಿಕರ, ಕಾರ್ಯಕರ್ತರ ಟೀಕೆಗೆ ಗುರಿಯಾಗಿದೆ.