ಸುದ್ದಿ
'ಆಟಗಾರ' ಟ್ರೇಲರ್ ನೋಡಿ
ಆ ದಿನಗಳು ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ 'ಆಟಗಾರ' ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ದ್ವಾರಕೀಶ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಮೂಡಿ ಬಂದಿರುವ ಈ ಸಿನೆಮಾ ಸಿನೆಮಾ ರಸಿಕರ ನಿರೀಕ್ಷೆ ಕೆರಳಿಸಿದೆ. ರಿಯಾಲಿಟಿ ಶೋ ಒಂದರ ಎಳೆಯನ್ನು ಇಟ್ಟುಕೊಂಡು ಕಥೆ ಹೆಣೆದಿರುವಂತೆ ಟ್ರೇಲರ್ ಸೂಚಿಸುತ್ತದೆ. ಆಟಗಾರರ ಎಲ್ಲ ಸಂಪರ್ಕಗಳನ್ನು ಕಡಿತಗೊಳಿಸಿ ಒಂದು ನಿಗೂಢ ದ್ವೀಪಕ್ಕೆ ಕರೆದುಕೊಂಡು ಹೋಗಿ ಬಿಟ್ಟಾಗ ನಡೆಯುವ ಕಥಾಹಂದರ ಹೊಂದಿರುವ ಥ್ರಿಲ್ಲರ್-ಹಾರರ್ ಸಿನೆಮಾ ಇರಬಹುದೇ ಇದು?