ಸುದ್ದಿ
ವಿಮಾನಕ್ಕೆ ಬೆಂಕಿ: ಕೂದಲೆಳೆ ಅಂತರದಲ್ಲಿ 172 ಮಂದಿ ಪಾರಾದ ವಿಡಿಯೋ
ಅಮೆರಿಕಾದ ಲಾಸ್ ವೇಗಸ್ ನಲ್ಲಿ ಮಂಗಳವಾರ ಟೇಕ್ ಆಫ್ ಆಗಲು ಸಿದ್ಧವಾಗಿ ನಿಂತಿದ್ದ ಬ್ರಿಟಿಷ್ ಏರ್ ವೇಸ್ ನ ವಿಮಾನವೊಂದು ಬೆಂಕಿಗಾಹುತಿಯಾದ ಘಟನೆ ವರದಿಯಾಗಿದೆ. ಬೆಂಕಿ ಅವಗಡದಲ್ಲಿ 16 ಮಂದಿಗೆ ಸುಟ್ಟು ಗಾಯಗಳಾಗಿದ್ದು, ವಿಮಾನದಲ್ಲಿದ್ದ 172 ಮಂದಿ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ. ನಿಲ್ದಾಣದಲ್ಲಿದ್ದ ಕೆಲ ಪ್ರಯಾಣಿಕರು ಈ ದೃಶ್ಯಗಳನ್ನು ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋ ಕೃಪೆ: ಡೈಲಿ ವಿಡಿಯೋಸ್

