ಸುದ್ದಿ
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್‌ನಲ್ಲಿ ಕಾರಿನ ಮೇಲೆ ಸಿಂಹ ದಾಳಿ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸಫಾರಿಯಲ್ಲಿ ಕಾರಿನ ಮೇಲೆ ಸಿಂಹಗಳು ದಾಳಿ ನಡೆಸಿವೆ. ಪ್ರವಾಸಿಗರಿದ್ದ ಇನೋವಾ ಕಾರಿನ ಮೇಲೆ ಸಿಂಹಗಳು ದಾಳಿ ಮಾಡಿವೆ. ಕಾರಿನ ಬಾಗಿಲುಗಳನ್ನು ಭದ್ರವಾಗಿ ಹಾಕಿಕೊಂಡಿದ್ದರಿಂದ ಯಾವುದೇ ತೊಂದರೆ ಸಂಭವಿಸಿಲ್ಲ. ಈ ಘಟನೆ ಸೆಪ್ಟೆಂಬರ್ 5ರಂದು ನಡೆದಿದ್ದು ಮತ್ತೊಂದು ಕಾರಿನಲ್ಲಿದ್ದ ಪ್ರವಾಸಿಗರು ಈ ದೃಶ್ಯಗಳನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
