ಕಾರ್ಗಿಲ್ ವಾರ್ ಲೈಕ್ ಸಿಚುಯೇಶನ್ ಅಲ್ಲ: ಹುತಾತ್ಮ ಯೋಧ ಅನುಜ್ ನಯ್ಯರ್ ಕುಟುಂಬ

ಕಾರ್ಗಿಲ್ ಯೋಜನೆಯನ್ನು ಪಾಕಿಸ್ತಾನ ಬಹಳ ಹಿಂದಿನಿಂದಲೂ ಯೋಚಿಸಿಕೊಂಡಿತ್ತು. ಕಾರ್ಗಿಲ್ ನಲ್ಲಿ ಎದುರಾದ ಸ್ಥಿತಿಯನ್ನು ಅನೇಕರು ಯುದ್ಧ ರೀತಿಯ ಪರಿಸ್ಥಿತಿ ಎಂದು ಹೇಳುತ್ತಾರೆ.
ಹುತಾತ್ಮ ಯೋಧ ಅನೂಜ್ ನಯ್ಯರ್ ಅನೂಜ್ ನಯ್ಯರ್
ಹುತಾತ್ಮ ಯೋಧ ಅನೂಜ್ ನಯ್ಯರ್ ಅನೂಜ್ ನಯ್ಯರ್
ಕಾರ್ಗಿಲ್ ಯೋಜನೆಯನ್ನು ಪಾಕಿಸ್ತಾನ ಬಹಳ ಹಿಂದಿನಿಂದಲೂ ಯೋಚಿಸಿಕೊಂಡಿತ್ತು. ಕಾರ್ಗಿಲ್ ನಲ್ಲಿ ಎದುರಾದ ಸ್ಥಿತಿಯನ್ನು ಅನೇಕರು ಯುದ್ಧ ರೀತಿಯ ಪರಿಸ್ಥಿತಿ ಎಂದು ಹೇಳುತ್ತಾರೆ. ಅಂದರೆ ಪೂರ್ಣಪ್ರಮಾಣದ ಯುದ್ಧವಲ್ಲ, ಯುದ್ಧದ ರೀತಿಯ ಸನ್ನಿವೇಷವಷ್ಟೇ ಎಂಬುದು ಅಂತಹವರ ಅಭಿಪ್ರಾಯ. 
ಆದರೆ ಯೋಧರ ಬಲಿದಾನ, ಶತ್ರುಗಳನ್ನು ಭಾರತದ ನೆಲದಿಂದ ಹೊರದಬ್ಬಿದ ಭಾರತೀಯ ಯೋಧರ ಕಾರ್ಯಾಚರಣೆ, ದೇಶದ ಜನತೆ ಅದಕ್ಕೆ ಸ್ಪಂದಿಸಿದ ರೀತಿ ಎಲ್ಲವನ್ನೂ ನೋಡಿದರೆ ಅದೊಂದು ಯುದ್ಧವಲ್ಲ ಎಂದು ಹೇಳುವುದಕ್ಕೆ ಬಹುಶಃ ಯಾವುದೇ ಅಂಶಗಳು ಸಿಗುವುದಿಲ್ಲವೇನೋ.. ಕಾರ್ಗಿಲ್ ಯುದ್ಧವಲ್ಲ, ಯುದ್ಧದ ರೀತಿಯ ಪರಿಸ್ಥಿತಿ ಎಂದು ಹೇಳುವುದನ್ನು ಕಾರ್ಗಿಲ್ ನ ಯುದ್ಧದಲ್ಲಿ ಮಗ ಅನುಜ್ ನಯ್ಯರ್ ನ್ನು ಕಳೆದುಕೊಂಡ ಅವರ ತಂದೆ ಆಕ್ಷೇಪಿಸುತ್ತಾರೆ. " ಅನುಜ್ ನಯ್ಯರ್ ಯುದ್ಧ ರೀತಿಯ ಸ್ಥಿತಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಲಿಲ್ಲ. ಏಕೆಂದರೆ ಶತ್ರುಗಳೊಂದಿಗೆ ಹೋರಾಡಬೇಕಾದರೆ ಸಾವಿನ ರೀತಿಯ ಪರಿಸ್ಥಿತಿ ಇರುವುದಿಲ್ಲ. ಇರುವುದು ಒಂದೋ ಸಾವು ಇಲ್ಲ ಬದುಕು ಎರಡೇ ಇರುತ್ತದೆ. ನಮ್ಮ ಮಕ್ಕಳನ್ನು ಯುದ್ಧದ ರೀತಿಯ ಪರಿಸ್ಥಿತಿಯಲ್ಲಿ ಸಾಯಲು ಬೆಳೆಸಿಲ್ಲ. ಗಡಿಯಲ್ಲಿ ಎಂದಿಗೂ ಸಾವಿನ ರೀತಿಯ ಪರಿಸ್ಥಿತಿ ಇರುವುದಿಲ್ಲ ಹಾಗಾಗಿ ಕಾರ್ಗಿಲ್ ವಾರ್ ಲೈಕ್ ಸಿಚುಯೇಶನ್ ಆಗಲು ಸಾಧ್ಯವಿಲ್ಲ, ನನ್ನ ಮಗ ಯುದ್ಧದಲ್ಲಿಯೇ ಹುತಾತ್ಮನಾಗಿದ್ದಾನೆ, ಕಾರ್ಗಿಲ್ ಯುದ್ಧವೇ ಸರಿ" ಎಂದು ಹೇಳುತ್ತಾರೆ. 
ಯುದ್ಧ ಘೋಷಣೆ ಮಾಡಿ ಹೋರಾಟ ನಡೆಸಿ ಹುತಾತ್ಮನಾಗಿದ್ದರೆ, ಬಹುಶಃ ನಮ್ಮನ್ನು ಇಷ್ಟು ನೋವು ಕಾಡುತ್ತಿರಲಿಲ್ಲವೇನೋ, ಆದರೆ ಅನುಜ್ ನಯ್ಯರ್ ನ್ನು ನಮ್ಮ ದೇಶದೊಳಗೇ ನುಸುಳಿದ್ದ ಅತಿಕ್ರಮಣಕಾರರು ನಮ್ಮ ದೇಶದೊಳಗೇ ಹತ್ಯೆ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಹಾಗಾದರೂ ಅನುಜ್ ನಯ್ಯರ್ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದಾರೆ, ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಕಾರ್ಗಿಲ್ ಹುತಾತ್ಮ ಯೋಧನ ಕುಟುಂಬ ಧನ್ಯತೆಯಿಂದ ನೆನೆಯುತ್ತದೆ. 
ಕ್ಯಾಪ್ಟನ್ ಅನುಜ್ ನಯ್ಯರ್, 17 ಜಾಟ್ ರೆಜಿಮೆಂಟ್ ನ ಯೋಧನಾಗಿದ್ದರು. ಟೈಗರ್ ಹಿಲ್ ನ್ನು ವಶಪಡಿಸಿಕೊಳ್ಳಬೇಕಾದರೆ ಜು.5 ರಂದು ಯೋಧ ಅನೂಜ್ ನಯ್ಯರ್ ಹುತಾತ್ಮರಾಗಿದ್ದರು. ಅನೂಜ್ ನಯ್ಯರ್ ಅವರೊಂದಿಗೆ ಕಾರ್ಯಾಚರಣೆ ನಡೆಸಿದ್ದ ಎಲ್ಲಾ 6 ಯೋಧರೂ ಸಹ ಹುತಾತ್ಮರಾಗಿದ್ದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಅನೂಜ್ ನಯ್ಯರ್ ಅವರಿಗೆ ಮರಣೋತ್ತರ ಮಹಾವೀರ ಚಕ್ರ ನೀಡಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com