

* ಅಜೀರ್ಣ, ಹೊಟ್ಟೆನೋವಿನ ಬಾಧೆಗೆ ಒಣಗಿಸಿಟ್ಟ ನೆಲ್ಲಿಕಾಯಿಯ ಬೀಜವನ್ನು ಮಜ್ಜಿಗೆ ಜತೆ ಅರೆದು ಕುಡಿದರೆ ನೋವು ಉಪಶಮನವಾಗುತ್ತದೆ.
* ಚರ್ಮದ ಕಾಂತಿಯುತ ಬೆಳವಣಿಗೆಗೆ ನೆಲ್ಲಿಕಾಯಿ ಪ್ರಯೋಜನಕಾರಿ. ಮುಖದ ಮೇಲಿನ ನೆರಿಗೆ, ಸುಕ್ಕುಗಟ್ಟುವಿಕೆ ಹೋಗಲಾಡಿಸಲು ನೆಲ್ಲಿಕಾಯಿಯ ರಸವನ್ನು ಹಚ್ಚಬೇಕು.
* ತಲೆಯ ಹೊಟ್ಟು, ಬಿಳಿ ಕೂದಲು ನಿವಾರಣೆಗೆ ನೆಲ್ಲಿಕಾಯಿ ರಸವನ್ನು ತಲೆಗೆ ಹಚ್ಚುತ್ತಾ ಬಂದರೆ ಕಾಂತಿಯುತ ತಲೆಗೂದಲು ನಿಮ್ಮದಾಗುತ್ತದೆ. ತಲೆಗೂ ತಂಪು. ಕೂದಲೂ ಚೆನ್ನಾಗಿ ಬೆಳೆಯುತ್ತದೆ.
* ಜೀರ್ಣಕ್ರಿಯೆಗೆ ನೆಲ್ಲಿಕಾಯಿ ಅತ್ಯುತ್ತಮ. ದೇಹದ ತೂಕ ಕಡಿಮೆ ಮಾಡುತ್ತದೆ. ರಕ್ತವನ್ನು ಶುದ್ಧಿ ಮಾಡುತ್ತದೆ.
* ಮುಖದ ಮೇಲಿನ ಮೊಡವೆ ನಿವಾರಣೆಗೂ ಪ್ರಯೋಜನಕಾರಿ.
* ನೆಲ್ಲಿಕಾಯಿ ರಸಕ್ಕೆ ಏಲಕ್ಕಿಪುಡಿ, ಸಕ್ಕರೆ ಹಾಕಿ ಜ್ಯೂಸ್ ತಯಾರಿಸಿ ಕುಡಿದರೆ ಸುಸ್ತು ಪರಿಹಾರವಾಗುತ್ತದೆ.
* ನೆಲ್ಲಿಕಾಯಿಯನ್ನು ಉಪ್ಪಿನಕಾಯಿ ಆರೋಗ್ಯಕ್ಕೆ ಹಿತ.
* ನೆಲ್ಲಿಕಾಯಿಯ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡರೆ ಅಜೀರ್ಣ, ಹೊಟ್ಟೆನೋವಿನ ಔಷಧಿಯಾಗಿ ಬಳಸಬಹುದು.
* ನೆಲ್ಲಿಕಾಯಿಯನ್ನು ಕತ್ತರಿಸಿ ಸಕ್ಕರೆ ಪಾಕದಲ್ಲಿ ಮಿಶ್ರಣ ಮಾಡಿ ಬಿಸಿಲಿನಲ್ಲಿ ಒಣಗಿಸಿಕೊಂಡರೆ ತಿನ್ನಲು ರುಚಿಯಾಗಿರುತ್ತದೆ.ಟಿ
-ಸುಮನಾ ಉಪಾಧ್ಯಾಯ