ಏಪ್ರಿಲ್ ಪೂಲ್

ಯಾವುದೋ ಲಕ್ಷುರಿ ಹೋಟೆಲ್ಲಿನಲ್ಲೋ, ಸಿನಿಮಾಗಳಲ್ಲೋ ನೋಡಿದ ಸ್ವಿಮ್ಮಿಂಗ್ ಪೂಲ್ ನಿಮ್ಮ ಮನೆಯಂಗಳಕ್ಕೆ ಬಂದರೆ ಹೇಗೆ?
ಸ್ವಿಮ್ಮಿಂಗ್ ಪೂಲ್
ಸ್ವಿಮ್ಮಿಂಗ್ ಪೂಲ್

ಯಾವುದೋ ಲಕ್ಷುರಿ ಹೋಟೆಲ್ಲಿನಲ್ಲೋ, ಸಿನಿಮಾಗಳಲ್ಲೋ ನೋಡಿದ ಸ್ವಿಮ್ಮಿಂಗ್ ಪೂಲ್ ನಿಮ್ಮ ಮನೆಯಂಗಳಕ್ಕೆ ಬಂದರೆ ಹೇಗೆ? ಸ್ವರ್ಗಕ್ಕೆ ಒಂದೇ ಗೇಣೇನು, ಮನೆ ಆಗ ಸ್ವರ್ಗ. ಈ ಸೆಖೆಗೆ ಸಮಾಧಾನ ಹೇಳಲು ಒಂದು ಪುಟ್ಟ ಸ್ನಾನ, ಕಚಗುಳಿಯ ನೀರಿನಾಟ... ಇವೆಲ್ಲದರಲ್ಲೂ ಸುಖ ಇಣುಕುತ್ತಲೇ ಇರುತ್ತದೆ. ಮನಸ್ಸು ಹಿಂದೆಂದಿಗಿಂತ ತಾಜಾಗೊಳ್ಳುತ್ತಲೇ ಇರುತ್ತದೆ.

ಈ ಏಪ್ರಿಲ್ ತಿಂಗಳಲ್ಲಿ ಸೆಖೆಯನ್ನು ಓದ್ದೋಡಿಸಲು ಸ್ವಿಮ್ಮಿಂಗ್‍ಪೂಲನ್ನು ನಿರ್ಮಿಸುವ ನಿರ್ಧಾರ ಮಾಡಿ. ಅದೇನು ಅಂಥ ಕಷ್ಟದ ಮಾತೇನಲ್ಲ. ಹಾಗೂ ಸುಲಭದಲ್ಲಿ ದುಡ್ಡು ಸುರಿದು ಸ್ವಿಮ್ಮಿಂಗ್ ಪೂಲೇನೋ ನಿರ್ಮಿಸಬಹುದು. ಆದರೆ, ಅದನ್ನು ಮೆಂಟೇನ್ ಮಾಡುವುದೇ ತುಸು ತಲೆನೋವಾಗಬಹುದು. ಆ ಕೆಲಸವೂ ದೊಡ್ಡದಲ್ಲ ಬಿಡಿ.

ಸ್ವಿಮ್ಮಿಂಗ್ ಪೂಲನ್ನು ಮೆಂಟೇನ್ ಮಾಡಲು ನಿಮ್ಮ ಅಮೂಲ್ಯ ಸಮಯವನ್ನು ಸ್ವಲ್ಪ ಹೆಚ್ಚೇ ವಿನಿಯೋಗಿಸಬೇಕು. ಇಲ್ಲದಿದ್ದಲ್ಲಿ ದಾರಿಬದಿಯ ಎಮ್ಮೆಹೊಂಡಕ್ಕೂ, ಸ್ವಿಮ್ಮಿಂಗ್ ಪೂಲ್‍ಗೂ ವ್ಯತ್ಯಾಸವಿಲ್ಲದಂತೆ ಆಗಿಬಿಡುತ್ತದೆ. ಪಾಚಿ ಬೆಳೆಯದೆ, ಸ್ವಚ್ಛ ಶುದ್ಧ ನೀರು ಪೂಲ್ ನಲ್ಲಿರಬೇಕೆಂದರೆ ಇವಿಷ್ಟು ಅಂಶಗಳನ್ನು ಗಮನಿಸಲೇಬೇಕು.

* ಪೂಲ್‍ನ ಹಿಡಿತ ಪಂಪ್‍ನಲ್ಲಿರುತ್ತದೆ. ಇದು ಪೂಲ್ ನ ನೀರನ್ನು ಮುಂದೆ ತಳ್ಳಿ ಫಿಲ್ಟರ್ ಮಾಡಿ ತಿರುಗಿ ಬಿಡುತ್ತದೆ. ಇದರಿಂದ ಕಸ, ಕೊಳಕು, ಪಾಚಿ ನಿವಾರಣೆಯಾಗುತ್ತದೆ. ಜೊತೆಗೆ ಪೂಲ್ ಚಾರದಂತೆ ನೋಡಿಕೊಳ್ಳಲು ಸಾಧ್ಯ. ಆದರೆ  ಪಂಪನ್ನು ಎಷ್ಟು ಗಂಟೆಗೊಮ್ಮೆ ಹಾಕಬೇಕು ಎನ್ನುವುದು ನಿಮ್ಮ ಪೂಲ್‍ನ ಗಾತ್ರ, ಪೈಪ್ ನ ಗಾತ್ರ, ಎಷ್ಟು ಜನ ಈಜುತ್ತಾರೆ, ಪಂಪ್ ನ ಗಾತ್ರ ಎಲ್ಲವನ್ನೂ ಅವಲಂಬಿಸಿದೆ. ಹೀಗಾಗಿ ಫೂಲ್ ಪ್ರೋಫೆಶನಲ್ ಗಳ ಬಳಿ ವಿಚಾರಿಸುವುದೊಳಿತು.

* ಪೂಲ್‍ನಲ್ಲಿ ಅಳವಡಿಸಿದ ಫಿಲ್ಟ್ರೇಶನ್ ಸಿಸ್ಟಂ, ಕೂದಲು, ಮಣ್ಣು, ಎಲೆ ಇತ್ಯಾದಿಗಳನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಫಿಲ್ಟರ್ ಅನ್ನು ಆಗಾಗ ಸ್ವಚ್ಛಗೊಳಿಸಬೇಕು. ಫಿಲ್ಟರ್ ಕ್ಲೀನರ್ ನಲ್ಲಿ 12 ಗಂಟೆಗಳ ಕಾಲ ನೆನೆಸಿಡುವುದರಿಂದ ಎಣ್ಣೆ, ಗ್ರೀಸ್ ನಂಥ ಅಂಟೂ ಹೋಗುತ್ತದೆ. ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ, ಮತ್ತೆ ಸ್ವಸ್ಥಾನಕ್ಕೆ ಅಳವಡಿಸಬೇಕು.

* ಬೇಸಿಗೆಯಲ್ಲಿ ವಾರಕ್ಕೆ 2ರಿಂದ 3 ಬಾರಿ ಪೂಲನ್ನು ಟೆಸ್ಟ್ ಮಾಡಬೇಕು. ಚಳಿಗಾಲದಲ್ಲಾದರೆ ವಾರಕ್ಕೊಮ್ಮೆ ಮಾಡಿದರೆ ಸಾಕು. ಇದಕ್ಕಾಗಿ ಟೆಸ್ಟ್ ಸ್ಟ್ರಿಪ್ ಗಳನ್ನು ನೀರಿನಲ್ಲಿ ಅದ್ದಿ ತೆಗೆದು, ಸ್ಯಾನಿಟೈಸರ್, ಪಿಎಚ್ ಲೆವೆಲ್ ಮತ್ತು ಕ್ಷಾರೀಯ ಮಟ್ಟವನ್ನು ತಿಳಿಯಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com