ಬೇಸಿಗೆ ಕಾಲದಲ್ಲಿ ಚರ್ಮ ಟ್ಯಾನ್ ಆಗುವುದರ ಜತೆಗೆ ತುಟಿಗಳೂ ಒಣಗಿ ಕಪ್ಪಗಾಗುತ್ತವೆ. ದೇಹದಲ್ಲಿನ ನೀರಿನಂಶ ಕಡಿಮೆಯಾದರೂ ತುಟಿಗಳು ಒಣಗಿ ಅಂದ ಕಳೆದುಕೊಳ್ಳುತ್ತವೆ. ಮೃದುವಾದ ತುಟಿಗಳ ಸೌಂದರ್ಯ ಹಾಗೂ ರಂಗು ಕಾಪಾಡಲು ಇಲ್ಲಿದೆ ಕೆಲವು ಟಿಪ್ಸ್
ಎರಡು ದೊಡ್ಡ ಚಮಚ ನಿಂಬೆರಸಕ್ಕೆ ಅಷ್ಟೇ ಪ್ರಮಾಣದಲ್ಲಿ ಜೇನು ತುಪ್ಪ ಸೇರಿಸಿ. ಈ ಮಿಶ್ರಣಗಳನ್ನು ತುಟಿಗಳಿಗೆ ಹಚ್ಚಿ ಒಂದು ಗಂಟೆಯ ನಂತರ ಹತ್ತಿಯಿಂದ ಉಜ್ಜಿ ತೆಗೆಯಿರಿ
ಗ್ಲಿಸರಿನ್‌ನಲ್ಲಿ ಅದ್ದಿದ ಹತ್ತಿಯಿಂದ ತುಟಿಗಳಿಗೆ ಮೃದುವಾದ ಮಾಲಿಶ್ ಮಾಡಿ. ಇದು ತುಟಿಗಳಿಗೆ ಮೃದುತ್ವ ನೀಡುವ ಜತೆಗೆ ಬಣ್ಣಗೆಡುವುದನ್ನು ತಡೆಯುತ್ತದೆ.
ಪ್ರತಿದಿನ ಬೆಳಗ್ಗೆ ಬ್ರಶ್‌ನಿಂದು ತುಟಿಗೆ ಮಸಾಜ್ ಮಾಡುವುದರಿಂದ ತುಟಿಯ ಮೇಲಿರುವ ಒಣಕೋಶಗಳನ್ನು (ಡ್ರೈಸೆಲ್ಸ್) ತೆಗೆಯಬಹುದು.
ಸೌತೆಕಾಯಿಯ ಹೋಳನ್ನು ಚೆನ್ನಾಗಿ ಜಜ್ಜಿ ಅದಕ್ಕೆ ಚಿಕ್ಕ ಚಮಚ ನಿಂಬೆ ರಸ ಸೇರಿಸಿ ತುಟಿಗಳಿಗೆ ಹಚ್ಚಿ ತುಟಿಯ ಬಣ್ಣ ಕೆಂಪಾಗುತ್ತದೆ.