ಡೇಂಜರ್ ಡೈವೋರ್ಸ್

ಡೈವೋರ್ಸ್‌ನಿಂದ ಯಾರಿಗೂ ಸುಖ ಸಿಕ್ಕ ಉದಾಹರಣೆ ಇಲ್ಲ. ದಂಪತಿ ಆಗಿದ್ದಾಗ ಎಷ್ಟು...
ಡೇಂಜರ್ ಡೈವೋರ್ಸ್

ಡೈವೋರ್ಸ್‌ನಿಂದ ಯಾರಿಗೂ ಸುಖ ಸಿಕ್ಕ ಉದಾಹರಣೆ ಇಲ್ಲ. ದಂಪತಿ ಆಗಿದ್ದಾಗ ಎಷ್ಟು ನೆಮ್ಮದಿ ಕಳೆದುಕೊಂಡಿದ್ದರೋ ಅದರ ಹತ್ತು ಪಟ್ಟು ನೆಮ್ಮದಿಯನ್ನು ಡೈವೋರ್ಸ್ ಕೊಟ್ಟಾದ ಮೇಲೆ ಕಳಕೊಳ್ತಾರಂತೆ ಇವರು...

ದಿನಬೆಳಗಾದರೆ ಎಷ್ಟೆಲ್ಲ ವಿಚ್ಛೇದನ ಅರ್ಜಿಗಳು ಕೋರ್ಟೊಳಗೆ ನುಸುಳುತ್ತವೆ. ಈ ಲೆಕ್ಕದಲ್ಲಿ ಸೆಲೆಬ್ರಿಟಿಗಳೂ ಹಿಂದೆ ಬಿದ್ದಿಲ್ಲ. ಹೃತಿಕ್‌ಗೆ ಡೈವೋರ್ಸ್ ಸಿಗ್ತಂತೆ ಅನ್ನೋ ನ್ಯೂಸು, ಸಾನಿಯಾ ಡೈವೋರ್ಸ್ ಆಗ್ತಾಳಂತೆ ಅನ್ನೋ ಗುಸು ಗುಸು, ಇವರೆಲ್ಲ ದಾಂಪ್ಯದಲ್ಲಿ ನೆಮ್ಮದಿಯೇ ಇಲ್ಲ ಎಂಬ ಕಾರಣಕ್ಕೆ ಡೈವೋರ್ಸ್ ನೀಡುವವರು.

ಆದರೆ, ಶಾಕಿಂಗ್ ವಿಚಾರ ಅಂದ್ರೆ ಇವರು ರಿಯಲ್ಲಾಗಿ ನೆಮ್ಮದಿ ಕಳಕೊಳ್ಳೋದು ಡೈವೋರ್ಸ್ ನಂತರವೇ. ಈಗ ವಿರಹವು ಕ್ಯಾನ್ಸರ್‌ಗಿಂತ ಮಾರಕ ಅನ್ನೋದು ಮನಃಶಾಸ್ತ್ರಜ್ಞರ ಮಾತು.

ದಂಪತಿ ಆಗಿದ್ದಾಗ ಎಷ್ಟು ನೆಮ್ಮದಿ ಕಳೆದುಕೊಂಡಿದ್ದರೋ ಅದರ ಹತ್ತು ಪಟ್ಟು ನೆಮ್ಮದಿಯನ್ನು ಡೈವೋರ್ಸ್ ಕೊಟ್ಟಾದ ಮೇಲೆ ಕಳಕೊಳ್ತಾರಂತೆ ಇವರು. ಏನಿಲ್ಲ ಅಂದ್ರೂ ನಿರ್ಧರಿತ ಆಯುಸ್ಸಿಗಿಂತ ಐದಾರು ವರುಷ ಮೊದಲೇ ಕಣ್ಮುಚ್ತಾರಂತೆ ಇವರು. ದಾಂಪತ್ಯದಲ್ಲಿದ್ದಾಗ ಚೆನ್ನಾಗಿದ್ದ ಇವರ ಆರೋಗ್ಯ ದಿನೇದಿನೇ ಹದಗೆಡಲು ಶುರುವಾಗುತ್ತದಂತೆ. ಹೊತ್ತಿಗೆ ಸರಿಯಾಗಿ ಊಟ ಮಾಡುವುದಿಲ್ಲ.

ಎದುರಾಗುವ ನೂರಾರು ಜನರು ಕೇಳುವ ಏನೇನೋ ಪ್ರಶ್ನೆಗಳಿಗೆ ಸಿಟ್ಟಾಗಿ ಇನ್ನಷ್ಟು ಆರೋಗ್ಯ ಕೆಡಿಸಿಕೊಳ್ತಾರಂತೆ. ಡೈವೋರ್ಸ್ ಕೊಟ್ಟವರ ಮೇಲೆ ಇದುವರೆಗೂ ಸಾವಿರಾರು ಸಮೀಕ್ಷೆಗಳು ನಡೆದಿವೆ. ಯಾವ ಸಮೀಕ್ಷೆಯಲ್ಲೂ ಇವರು ನೆಮ್ಮದಿ ಆಗಿರ್ತಾರೆಂಬ ಫಲಿತಾಂಶ ಹೊರಬಿದ್ದೇ ಇಲ್ಲ.

ಏನೇನು ಸೈಡ್ ಎಫೆಕ್ಟು?

  • ಡೈವೋರ್ಸ್ ಅನಗತ್ಯ ಚಿಂತೆಗೀಡು ಮಾಡುತ್ತದೆ. ಮಾಜಿ ಸಂಗಾತಿಯ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ನಿತ್ಯವೂ ತಲೆಕೆಡಿಸಿಕೊಳ್ಳುತ್ತಾರಿವರು.
  • ಡೈವೋರ್ಸ್ ಕೋಟ್ಟ ವ್ಯಕ್ತಿಗೆ ಸಾರ್ಥಕ ಸಾವಿಲ್ಲ. ಅಕಾಲಿಕ ಮರಣ ಅಂತಾರೆ ಮನೋವೈದ್ಯರು.
  • ಸಂಗಾತಿಯಿಂದ ಬೇರ್ಪಟ್ಟ ವ್ಯಕ್ತಿಗೆ ವಿರಹ ವೇದನೆ ಕಾಡುತ್ತದೆ. ನಿದ್ದೆ ಸರಿಯಾಗಿ ಬರುವುದಿಲ್ಲ.
  • ರಕ್ತದೊತ್ತಡ ಹೆಚ್ಚಾಗುತ್ತದೆ.
  • ಸಕ್ಕರೆ ಕಾಯಿಲೆಯೂ ಬರಬಹುದು.
ಆತ್ಮಹತ್ಯೆ ಮಾರ್ಗ
ಈಗ ಹೇಳಿ ಡೈವೋರ್ಸ್ ನಿಮ್ಗೆ ಬೇಕಾ?
ಸಮೀಕ್ಷೆ ಸಾರಿದ್ದೇನು?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com