ಮುಟ್ಟಿನ ನೋವಿಗೆ ಮುಕ್ತಿ

ಮಹಿಳೆಯರನ್ನು ಹಲವು ಕಾರ್ಯಕ್ರಮಗಳಿಂದ ದೂರ ಇರುವಂತೆ ಮಾಡುವಲ್ಲಿ ನೋವು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಹಿಳೆಯರನ್ನು ಹಲವು ಕಾರ್ಯಕ್ರಮಗಳಿಂದ ದೂರ ಇರುವಂತೆ ಮಾಡುವಲ್ಲಿ ನೋವು ಭರಿತ ಮುಟ್ಟಿನದು ಮುಖ್ಯ ಪಾತ್ರ. ಈ ಸಮಯದಲ್ಲಿ ಕಾಡುವ ನೋವು ಮಹಿಳೆಯಿಂದ ಮಹಿಳೆಗೆ ವಿಭಿನ್ನವಾಗಿರಬಹುದು. ಅನುಭವಿಸುವ ಕಿರಿಕಿರಿ ಮಾತ್ರ ಒಂದೇ. ಜೀವನದ ಹಳಿಯೇ ತಪ್ಪಿದಂಥ ಅನುಭವ. ಈ ನೋವನ್ನು ಹತ್ತಿಕ್ಕಲು ಕೆಲವು ಮನೆ ಮದ್ದುಗಳಿವೆ. ಏನವು?

ಹಾಲಿನಲ್ಲಿರುವ ಕ್ಯಾಲ್ಸಿಯಂ ನೋವಿನ ವಿರುದ್ಧ ಹೋರಾಡಬಲ್ಲದು. ಉಪಹಾರದೊಂದಿಗೆ ಲೋಟ ಹಾಲು ಸೇವನೆ ಉತ್ತಮ. ಇಷ್ಟವಾಗದಿದ್ದಲ್ಲಿ ಕ್ಯಾಲ್ಸಿಯಂ ಮಾತ್ರೆಯನ್ನಾದರೂ ಸೇವಿಸಿ.

ಮುಟ್ಟಿನ ದಿನ ಹತ್ತಿರವಾಗುತ್ತಲೇ ಪಪ್ಪಾಯಿ ಸೇವಿಸಿ. ಇದರಲ್ಲಿ ನೋವಿನ ವಿರುದ್ಧ ಹೋರಾಡುವ ಕಿಣ್ಣಗಳಿವೆ. ಅಲ್ಲದೆ, ಮುಟ್ಟಾದಾಗ ರಕ್ತದ ಹರಿವನ್ನು ಸಹನೀಯ ಮತ್ತು ಸುಲಭವಾಗುವಂತೆ ಮಾಡುತ್ತದೆ.

ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಮಾತ್ರವಲ್ಲ ಮುಟ್ಟಿನ ಸಮಸ್ಯೆ ನಿವಾರಿಸಲೂ ಪ್ರಮುಖ ಪಾತ್ರವಹಿಸುತ್ತದೆ. ಋತುಚಕ್ರದ ವೇಳೆ ರಕ್ತದ ಹರಿವು ಸುಲಭವಾಗಲು ಒಂದು ಲೋಟ ಕ್ಯಾರೆಟ್ ರಸ ಒಳಿತು.

ಲೋಳೆಸರ ದೇಹದ ಅನೇಕ ತೊಂದರೆಗಳಿಗೆ ಮದ್ದಾಗಿರುವಂತೆ ಮುಟ್ಟಿನ ನೋವನ್ನೂ ನಿಯಂತ್ರಿಸಬಲ್ಲದು. ಇದರ ರಸವನ್ನು ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ ಸೇವಿಸಿದರೆ ನೋವು ರಹಿತ ರಕ್ತದ ಹರಿವಗೆ ಸಹಕರಿಸಬಲ್ಲದು.

ಶಾಂತಗೊಳಿಸುವ ಆಪ್ಯಾಯಮಾನವಾದ ಗುಣಕ್ಕೆ ಲ್ಯಾವೆಂಡರ್ ಹೆಸರುವಾಸಿ. ಹೊಟ್ಟೆ ನೋವು ಕಾಣಿಸಿಕೊಂಡಾಗ ಇದರ ತೈಲವನ್ನು ಲೇಪಿಸುವುದರಿಂದ 10-15 ನಿಮಿಷಗಳಲ್ಲಿ ಶಮನವಾಗುತ್ತದೆ.

ಪ್ರಬಲ ನೋವು ನಿವಾರಕ ತುಳಸಿಯಲ್ಲಿ ಕೆಫಿಕ್ ಆಮ್ಲ ಇರುವುದರಿಂದ ನೋವಿರುವಾಗ ಇದನ್ನು ಹೆಚ್ಚಾಗಿ ಸೇವಿಸಬೇಕು. ಮಸಾಲೆಯೊಂದಿಗೆ ಅಥವಾ ಚಹಾದೊಂದಿಗೂ ಬಳಸಬಹುದು.

ಮುಟ್ಟಾದಾಗ ಸ್ನಾನ ಮಾಡಿದಿದ್ದರೆ ಆರೋಗ್ಯ ಸಂಬಂಧ ಸಮಸ್ಯೆಗಳು ಹೆಚ್ಚುತ್ತವೆ. ಆದರೆ, ಹೊಟ್ಟೆ ಮತ್ತು ಕಿಬ್ಬೊಟ್ಟೆ ಪ್ರದೇಶಕ್ಕೆ ಬಿಸಿ ನೀರು ತಾಗಿದರೆ, ಮುಟ್ಟಿನ ರಕ್ತದ ಹರಿವನ್ನು ಸುಲಭವಾಗಿಸುತ್ತದೆ.

ನೋವು ನಿವಾರಕ ಏಜೆಂಟ್ ಶುಂಠಿ ಸೇವನೆಯಿಂದ ಪರಿಣಾಮಕಾರಿ ಪ್ರಯೋಜನಗಳಿವೆ.

ಆದಷ್ಟು ಸಿಟ್ರಸ್ ಅಂಶವಿರುವ ಹಣ್ಣುಗಳನ್ನು ಸೇವಿಸಿ.

ಗರ್ಭಕೋಶಕ್ಕೆ ರಕ್ತ ಸಂಚಾರ ಕಡಿಮೆಯಾಗುವುದರಿಂದ ಮುಟ್ಟಿನ ಹಲವು ಸಮಸ್ಯೆಗಳಿಗೆ ಕಾರಣವಾಗಬಲ್ಲದು. ಜೀರಿಗೆ ರಕ್ತ ಸಂಚಾರವನ್ನು ಸುಧಾರಿಸುತ್ತದೆ. ನೀರಿಗೆ ಜೀರಿಗೆ ಕುದಿಸಿ, ಕುಡಿದರೆ ನೋವು ಸಹಜವಾಗಿಯೇ ಕಡಿಮೆಯಾಗುತ್ತದೆ.

ನಿಯಮಿತವಾಗಿ ವ್ಯಾಯಾಮವೂ ದೇಹದ ರಕ್ತ ಸಂಚಾರವನ್ನು ಸುಗಮಗೊಳಿಸುವುದರಿಂದ ಸಕಲ ಸಮಸ್ಯೆಗಳಿಗೂ ಪರಿಹಾರವಾಗಬಲ್ಲದು.

ಅಪೌಷ್ಠಿಕತೆಯೂ ಮುಟ್ಟಿನ ತೊಂದರೆಗೆ ಮುಖ್ಯ ಕಾರಣ
ಮನುಷ್ಯ ಆರೋಗ್ಯವಂತನಾಗಿರಲು ಆಹಾರ ಕ್ರಮದ ಮೇಲೆ ನಿಗಾ ಇಡುವುದು ಅತ್ಯಗತ್ಯ. ಬರ್ಗರ್, ಪಾಸ್ತಾದಂತ ಕೊಬ್ಬಿನ ಮತ್ತು ಜಿಡ್ಡಿನ ಆಹಾರದಿಂದ ದೂರವಾದಷ್ಟೂ ಆರೋಗ್ಯ ಸುಧಾರಿಸುತ್ತದೆ. ಇದು ಮುಟ್ಟಿನ ತೊಂದರೆ ನಿವಾರಿಸುವಲ್ಲೂ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಏರಿಯೇಟೆಡ್ ಪಾನೀಯ ಹಾಗೂ ಮದ್ಯಪಾನೀಯಗಳಿಂದಲೂ ಮುಕ್ತರಾದರೊಳಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com