ಅಡುಗೆ ಮನೆ: ಮನೆಯ ಕೇಂದ್ರಭಾಗ

ಮನೆಯ ಕೇಂದ್ರಬಿಂದು ಅಡುಗೆ ಮನೆ ಎಂದರೆ ತಪ್ಪಾಗಲಾರದು. ಮನೆ ಸದಸ್ಯರ ಆರೋಗ್ಯ, ಸಂತೋಷ ಇರುವುದು ಅಡುಗೆ ಮನೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮನೆಯ ಕೇಂದ್ರಬಿಂದು ಅಡುಗೆ ಮನೆ ಎಂದರೆ ತಪ್ಪಾಗಲಾರದು. ಮನೆ ಸದಸ್ಯರ ಆರೋಗ್ಯ, ಸಂತೋಷ ಇರುವುದು ಅಡುಗೆ ಮನೆಯಲ್ಲಿ. ಅದರ ಸ್ವಚ್ಛತೆ ಕಾಪಾಡುವುದು ಮನೆ ಸದಸ್ಯರೆಲ್ಲರ ಕರ್ತವ್ಯ ಕೂಡ.

ಅಡುಗೆ ಮನೆಯಲ್ಲಿ ಕೆಲಸ ಹೆಚ್ಚು. ತರಕಾರಿ ಹೆಚ್ಚುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಸಾಮಗ್ರಿಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುವುದು ಹೀಗೆ ಹತ್ತಾರು...

ಅಡುಗೆ ಮಾಡುವಾಗ ಎಣ್ಣೆ ಟೈಲ್ಸ್ ಮೇಲೆ ಬೀಳುತ್ತದೆ, ಪದಾರ್ಥಗಳು ಚೆಲ್ಲುತ್ತವೆ. ಹೀಗಿರುವಾಗ ಅಡುಗೆಮನೆಯನ್ನು ಯಾವತ್ತೂ ಸ್ವಚ್ಛವಾಗಿ, ಒಪ್ಪ-ಓರಣವಾಗಿ ಇಟ್ಟುಕೊಳ್ಳುವುದು ಹೇಗೆಂಬುದು ಮನೆಯೊಡತಿಗೆ ಆತಂಕ.

ಆಗಂತುಕವಾಗಿ ನೆಂಟರಿಷ್ಟರೋ, ಅತಿಥಿಗಳೋ, ಸ್ನೇಹಿತರೋ ಬಂದರಂತೂ ಕೇಳುವುದೇ ಬೇಡ.. ಯೋಗಕ್ಷೇಮ ಮಾತನಾಡುತ್ತಾ ಅಡುಗೆಮನೆ ಹೇಗೆದೆಯೆಂದು ನೋಡಲು ಬರುತ್ತಾರೆ.. ಆಗ ಅಡುಗೆಮನೆ ಸುಂದರವಾಗಿ ಕಾಣದಿದ್ದರೆ ಮನಸ್ಸಿಗೆ ಕಿರಿಕಿರಿ...

ಅಡುಗೆಮನೆ ಯಾವಾಗಲೂ ಸ್ವಚ್ಛವಾಗಿ, ಸುಂದರವಾಗಿ ಕಾಣಲು ಹೀಗೆ ಮಾಡಬಹುದು.
 *    ಪ್ರತಿದಿನವೂ ಅಡುಗೆಮನೆಯಲ್ಲಿ ಅಡುಗೆ ಮಾಡಿ ಮುಗಿಸಿದ ನಂತರ ಸ್ಟೌವನ್ನು ಚೆನ್ನಾಗಿ ಒರಸಿ ಇಡಬೇಕು. ಬ್ಯಾಕ್ಟೀರಿಯಾ, ಕೀಟಾಣುಗಳಿಂದ ದೂರವಿರುವುದನ್ನು ತಡೆಗಟ್ಟುತ್ತದೆ.
 *    ಅಡುಗೆಮನೆಯ ನೆಲ, ಸ್ಲಾಬ್, ಶೆಲ್ಫ್, ಸಿಂಕುಗಳನ್ನು ವಾರಕ್ಕೆ ಒಂದು ಬಾರಿಯಾದರೂ ವಿನಿಗರ್, ಫಿನಾಯಿಲ್ ಹಾಕಿ ತೊಳೆದರೆ ಉತ್ತಮ.
 *    ಅಡುಗೆಮನೆ ವಿಶಾಲವಾಗಿದ್ದಷ್ಟೂ ಒಳ್ಳೆಯದು. ಗಾಳಿ, ಬೆಳಕು ಚೆನ್ನಾಗಿ ಬರಬೇಕು.
 *    ಅಡುಗೆ ಮನೆಯಿಂದ ಹೊಗೆ ಹೋಗಲು ಸೂಕ್ತ ಕೊಳವೆ ಅವಶ್ಯಕ.
 *    ಅಡುಗೆ ಮಾಡುವಾಗ ಕೆಲವೊಂದು ಬಾರಿ ಎಣ್ಣೆ ಚೆಲ್ಲುತ್ತದೆ, ಒಗ್ಗರಣೆ  ಸಿಡಿದು ಶೆಲ್ಪ್, ಟೈಲ್ಸ್ ಮೇಲೆ ಬೀಳುತ್ತದೆ. ಅದಕ್ಕೆ ಪೇಪರ್‍ನ್ನು ಟೈಲ್ಸ್ ಗೆ ಅಂಟಿಸಬೇಕು. ಶೆಲ್ಫನಲ್ಲಿಯೂ ಎಣ್ಣೆ ಪಾತ್ರದ ಕೆಳಗೆ ಪೇಪರ್‍ನ್ನು ಇಟ್ಟರೆ ಸ್ವಚ್ಛಗೊಳಿಸಲು ಸುಲಭವಾಗುತ್ತದೆ. ಪೇಪರ್‍ನ್ನು ವಾರಕ್ಕೊಮ್ಮೆ ಬದಲಾಯಿಸುತ್ತಿರಿ.
 *    ಅಡುಗೆಮನೆಗೆ ಪ್ರತ್ಯೇಕ ಕಸದಬುಟ್ಟಿ ಅಗತ್ಯ. ಕೊಳೆತ ಸಾಮಗ್ರಿಗಳು, ಹಣ್ಣು, ತರಕಾರಿಗಳ ಕಸಗಳನ್ನು ಪ್ರತ್ಯೇಕವಾಗಿ ದಿನದಿಂದ ದಿನಕ್ಕೆ ಹೊರಹಾಕುತ್ತಿರಬೇಕು.
 *    ಪಾತ್ರೆ, ಸಿಂಕುಗಳಲ್ಲಿ ಕುಳಿತ ಕೊಳಕು ಸಾಧಾರಣ ತೊಳೆಯುವಿಕೆಗೆ ಹೋಗದಿದ್ದರೆ ಒಂದು ಚೂರು ಸೋಡಾಪುಡಿಯನ್ನು ಹಾಕಿ ತೊಳೆದರೆ ಸ್ವಚ್ಛವಾಗುತ್ತದೆ.
 *    ಫ್ರಿಜ್‍ನ್ನು ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಇಡುತ್ತೇವೆ. ಇದನ್ನು ತಿಂಗಳಿಗೆ ಎರಡು ಬಾರಿಯಾದರೂ ಕಡ್ಡಾಯವಾಗಿ ಸ್ವಚ್ಛಗೊಳಿಸುವುದು ಉತ್ತಮ. ರೆಫ್ರಿಜರೇಟರ್‍ನಲ್ಲಿರುವ ಎಲ್ಲಾ ಸಾಮಾನುಗಳನ್ನು ತೆಗೆದು ಡ್ರಾಯರ್, ಶೆಲ್ಫ್‍ಗಳನ್ನು ಕ್ಲೀನ್ ಮಾಡಿ ನಂತರ ವಸ್ತುಗಳನ್ನು ತುಂಬಿಸಿಡಬೇಕು.
 *    ಹೆಚ್ಚಿನ ಓವನ್‍ಗಳಲ್ಲಿ ಸ್ವಚ್ಛಗೊಳಿಸುವಿಕೆ ಪ್ರಕ್ರಿಯೆ ಅದರಲ್ಲಿಯೇ ಆಗುತ್ತದೆ. ಒಂದು ವೇಳೆ ಇಲ್ಲದಿದ್ದರೆ ಸ್ಪಾಂಜ್ ಮೂಲಕ ತಿಂಗಳಿಗೊಮ್ಮೆ ಸ್ವಚ್ಛಗೊಳಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com