ಹಳೇ ಮೂಗುತಿ ಈಗ ಹೊಸ ಫ್ಯಾಶನ್

ಹೆಣ್ಣು ಧರಿಸುವ 5 ಮುತ್ತುಗಳಲ್ಲಿ ಮೂಗುತಿಯು ಒಂದಾಗಿದೆ! ಮೂಗುತಿ ಹೆಣ್ಣಿನ ಅಂಧವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಮೂಗುತಿ ಧರಿಸುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಹೆಣ್ಣು ಧರಿಸುವ 5 ಮುತ್ತುಗಳಲ್ಲಿ ಮೂಗುತಿಯು ಒಂದಾಗಿದೆ! ಮೂಗುತಿ ಹೆಣ್ಣಿನ ಅಂಧವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಮೂಗುತಿ ಧರಿಸುವ ಕಾಲವಲ್ಲ ಅಂತ ಹೇಳುವ ಮಾತು ಸದ್ಯಕ್ಕೆ ಹಳೆಯದಾಗಿದೆ. ಏಕೆಂದರೆ, ಹಳೇ ಫ್ಯಾಶನ್ ಈಗ ಹೊಸ ಫ್ಯಾಶನ್ ಆಗಿದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಧರಿಸುತ್ತಿದ್ದ ದೊಡ್ಡ ದೊಡ್ಡ ಮೂಗುತಿ ಈಗ ಹೊಸ ಫ್ಯಾಶನ್ ಆಗಿದೆ. ಆದರೆ ಇಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಮೂಗುತಿ ಚಿನ್ನವೇ ಆಗಿರಬೇಕು ಎಂದೇನಿಲ್ಲ ಅಷ್ಟೆ.
ವಿವಿಧ ವಿನ್ಯಾಸದ ಮೂಗುತಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಕಾಲೇಜ್ ಹುಡುಗಿಯರಿಂದ ಹಿಡಿದು ವಯಸ್ಸಾದ ಮಹಿಳೆಯರು ಕೂಡ ವಿವಿಧ ವಿನ್ಯಾಸದ ಮೂಗುತಿಯತ್ತ ಮೊರೆ ಹೋಗುತ್ತಿದ್ದಾರೆ. ಹರಳು, ಮುತ್ತು, ಸೇರಿದಂತೆ ಇತರ ವಿನ್ಯಾಸಕ್ಕೆ ಬಳಸುವ ವಸ್ತುಗಳಿಂದ ಮೂಗುತಿಯನ್ನು ತಯಾರಿಸುತ್ತಿದ್ದಾರೆ. ಆಗಿನ ಕಾಲದಲ್ಲಿ ಲಂಬಾಣಿ ಜನತೆ ಧರಿಸುತ್ತಿದ್ದ ಮೂಗುತಿ, ಈಗ ಎಲ್ಲರ ಮನನೆಚ್ಚಿಸುವ ಮೂಗುತಿಯಾಗಿದೆ. ರಿಂಗ್, ಚಕ್ರಾಕಾರದಲ್ಲಿ, ಗುಂಡು ಮಾದರಿಯಲ್ಲಿ, ಕಿವಿ ಓಲೆಗೆ ಮ್ಯಾಚ್ ಆಗುವಂತಹ ಮೂಗುತಿ, ಪ್ರೇಸ್ಸಿಂಗ್ ರಿಂಗ್, ಹೃದಯಾಕಾರ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಲಭ್ಯವಿದೆ. ಈಗ ಬಟ್ಟೆಗೆ ಮ್ಯಾಚ್ ಆಗುವಂತಹ ಮೂಗುತಿಯನ್ನು ಧರಿಸಬಹುದಾಗಿ. ಅತಿ ಕಡಿಮೆ ದರದಲ್ಲಿ ಇಂತಹ ಮೂಗುತಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಪಾರ್ಟಿಗಳಲ್ಲಿ ತಾವು ತೊಟ್ಟ ಬಟ್ಟೆಗೆ ಹೊಂದುವಂತಹ ಕಲರ್ ಕಲರ್ ಮೂಗುತಿಗಳನ್ನು ಕೊಳ್ಳಬಹುದಾಗಿದೆ. ಇದರ ಬೆಲೆ ರು.10 ರಿಂದ ಆರಂಭವಾಗುತ್ತದೆ. ಮೂಗುತಿ ವಿನ್ಯಾಸಕ್ಕೆ ತಕ್ಕಂತೆ ಬೆಲೆ ಕೊಡಬೇಕಾಗುತ್ತದೆ.

ಬಟ್ಟೆಗೆ ತಕ್ಕಂತೆ ಮೂಗುತಿ ಆಯ್ಕೆ ಹೀಗಿರಲಿ...

ಜೀನ್ಸ್ ಫ್ಯಾಂಟ್ ಅಥವಾ ಚಿಕ್ಕ ಉಡುಪು ಧರಿಸಿದಾಗ ಸಿಲ್ವರ್ ಕಲರ್, ಗೋಲ್ಡ್ ನ ಕಲರ್ ನ ರಿಂಗ್ ಆಕಾರದಲ್ಲಿರುವ ಮೂಗುತಿ ಧರಿಸಿದರೆ ನೊಡಲು ಸುಂದರವಾಗಿ ಕಾಣುತ್ತದೆ. ಪ್ಯಾಂಟ್, ಶರ್ಟ್ ಸೇರಿದಂತೆ ಪಾಶ್ಚಾತ್ಯ ಮಾದರಿ ಬಟ್ಟೆಗಳನ್ನು ಧರಿಸಬೇಕಾದರೆ ತುಂಬಾ ಸಣ್ಣದಾಗಿರುವ ಮೂಗುತಿ ರಿಂಗ್ ಧರಿಸಬೇಕು. ವೆಸ್ಟ್ರನ್ ಮಾದರಿ ಉಡುಪುಗಳಿಗೆ ಸ್ಟಡ್ ಮೂಗುತಿಗಿಂತ ರಿಂಗ್ ಮೂಗುತಿ ಧರಿಸುವುದು ಹೆಚ್ಚು ಆಕರ್ಷಿಣೀಯವಾಗಿರುತ್ತದೆ.

ಚೂಡಿದಾರ್, ಲೆಹಂಗ ಸೇರಿದಂತೆ ಇತರೆ ಸಾಂಪ್ರಾದಾಯಿಕ ಉಡುಗೆ ತೊಟ್ಟರೆ, ಸ್ಟಡ್ ಮೂಗುತಿ ನಿಮ್ಮ ಅಂಧವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಮ್ಯಾರೇಜ್ ಅಥವಾ ಯಾವುದೇ ಕಾರ್ಯಕ್ರಮಗಳಿಗೆ ಹೋಗಬೇಕಾದರೆ, ಸಿಂಗಲ್ ಸ್ಟೋನ್ ಮೂಗುತಿ ಚೆಂದ ಕಾಣುತ್ತದೆ. ಚೂಡಿದಾರ್, ಸೆಲ್ವಾರ್ ಗಳಿಗೆ ಸಣ್ಣ ಹರಳಿನ ಮೂಗುತಿ ಅಥವಾ ಮುತ್ತಿನಿಂದ ಮಾಡಿದ ಮೂಗುತಿ ಧರಿಸಿದರೆ ಮತ್ತಷ್ಟು ಚಂದ ಕಾಣುತ್ತದೆ. ಹಾಗೇ, ಸಣ್ಣ ಸಣ್ಣ ಹರಳುಗಳಿಂದ ಮಾಡಿದಂತಹ ರಿಂಗ್ ಆಕಾರದ ಮೂಗುತಿಯು ಚೆನ್ನಾಗಿ ಕಾಣುತ್ತದೆ.

ಇನ್ನು ನಮ್ಮ ಸಾಂಪ್ರಾದಾಯಿಕ ಉಡುಗೆ ಎಂದರೆ ಸೀರೆ. ಸೀರೆ ಉಟ್ಟಾಗ ಸಾಂಪ್ರಾದಾಯಿಕದಂತೆ ದೊಡ್ಡ ಹರಳುಳ್ಳ ಮೂಗುತಿ ಧರಿಸಿದರೆ ಅಂಧ ಮತ್ತಷ್ಟು ಹೆಚ್ಚುತ್ತದೆ. ಹೂವು, ಮಾವು, ಅರ್ಧ ಚಂದ್ರ, ಬಾಣ ಸೇರಿದಂತೆ ಇತರೆ ಆಕಾರಗಳಲ್ಲಿ ಮುತ್ತು ಅಥವಾ ಹರಳಿನಿಂದ ತಯಾರಿಸಿದ ಗೋಲ್ಡನ್ ಬಣ್ಣದ ಮೂಗುತಿ ಬಳಸಬಹುದು. ದೊಡ್ಡ ಹರಳು ಮತ್ತು ಮುತ್ತುಗಳಿಂದ ತಯಾರಿಸಿದಂತೆ ಮೂಗುತಿ ರಿಂಗ್ ಕೂಡ ಧರಿಸಬಹುದು. ನೀವು ಧರಿಸುವ ಓಲೆ, ಬೈತಲೆ ಬಟ್ಟು, ನೆಕ್ಲೆಸ್ ದೊಡ್ಡದಾಗಿದ್ದರೆ, ಮೂಗುತಿ ಸಣ್ಣದಾಗಿರಲಿ. ಒಂದು ವೇಳೆ ಅವುಗಳು ಚಿಕ್ಕದಾಗಿದ್ದರೆ, ಮೂಗತಿ ದೊಡ್ಡದಾಗಿರಲಿ.

ಸಿಂಪಲ್ ಪಾರ್ಟಿಗಳಲ್ಲಿ ಸಣ್ಣ ಮೂಗುತಿ ಧರಿಸಬೇಕು. ಕಾಲೇಜು ಹುಡುಗಿಯರು ಫ್ರೆಂಡ್ಸ್ ಜೊತೆ ಪಾರ್ಟಿಗೆ ಹೋಗಬೇಕಾದಲ್ಲಿ, ಚೌಕ, ಹೃದಯ, ತಿಕ್ರೋನಕಾರದಲ್ಲಿ ಲಭ್ಯವಾಗುವ ಮೂಗುತಿ ಧರಿಸಬಹುದು. ಇವು ಅತಿ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ಬಾಲಿವುಡ್ ಬೆಡಗಿಯರು ಕೂಡ ಇಂತಹ ವಿನ್ಯಾಸಕ್ಕೆ ಮೊರೆ ಹೋಗಿದ್ದಾರೆ.

ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com