ಈಗ ಪುಟಾಣಿ ಟ್ಯಾಟೂ ಟ್ರೆಂಡ್

ಹಿಂದೆ ಸೂಜಿಗಳಿಂದ ಅಚ್ಚೆ ಹಾಕಿಸಿಕೊಂಡಿದ್ದರೆ, ಇಂದು ಜನ ಟ್ಯಾಟೂ ಮೆಶಿನ್ ಗಳಿಂದ ಅಚ್ಚೆ ಹಾಕಿಸಿ...
ಪುಟಾಣಿ ಟ್ಯಾಟೂ ಈಗ ಟ್ರೆಂಡ್
ಪುಟಾಣಿ ಟ್ಯಾಟೂ ಈಗ ಟ್ರೆಂಡ್

ಈ ಫ್ಯಾಶನ್ ದುನಿಯಾದಲ್ಲಿ ಟ್ಯಾಟೂಗಳು ಲಗ್ಗೆ ಇಟ್ಟು ಬಹಳ ದಿನಗಳಾಯ್ತು. ಆದರೆ, ಈ ಟ್ಯಾಟುಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಿಂದೆ ಸೂಜಿಗಳಿಂದ ಅಚ್ಚೆ ಹಾಕಿಸಿಕೊಂಡಿದ್ದರೆ, ಇಂದು ಜನ ಟ್ಯಾಟೂ ಮೆಶಿನ್ ಗಳಿಂದ ಅಚ್ಚೆ ಹಾಕಿಸಿಕೊಳ್ಳುತ್ತಾರೆ. ಅದೊಂದು ದೊಡ್ಡ ಮಟ್ಟದ ಬ್ಯುಸಿನೆಸ್ ಆಗಿ ಬೆಳೆದಿದೆ. ಟ್ಯಾಟೂ ಸ್ಟೈಲ್ ನಲ್ಲಿ ಪ್ರಸ್ತುತ ಟ್ರೆಡಿಂಗ್ ನಲ್ಲಿರುವುದು ಬರ್ನಿಂಗ್ ಸ್ಟೈಲ್.

ಟ್ಯಾಟೂ ಕ್ರೇಜ್ ಯುವಜನತೆಗೆ ಇರುವುದು ಮಾಮೂಲು. ಹೆಚ್ಚಿನವರಿಗೆ ಟ್ಯಾಟೂ ಹಾಕಿಸಿಕೊಳ್ಳುವುದು ಒಂದು ಫ್ಯಾಶನ್ ಥರ. ಅದಕ್ಕೆ ಎಷ್ಟೋ ಮಂದಿ ಸ್ವಲ್ಪ ನೋವು ತಿಂದರೂ ಪರವಾಗಿಲ್ಲ ಎಂದು ಆಸೆ ಪಟ್ಟು ಟ್ಯಾಟೂ ಹಾಕಿಸುಕೊಳ್ಳುತ್ತಾರೆ.

ಟ್ಯಾಟೂ ಡಿಸೈನ್ ಗಳಲ್ಲೂ ವೆರೈಟಿ ಇರೋದು ಎಲ್ಲರಿಗೂ ತಿಳಿದಿದೆ. ಆದರೆ ಇದರಲ್ಲೂ ಟ್ರೆಂಡ್ ಫ್ರಾಶನ್ ಇದೆ. ಟ್ಯಾಟೂ ದುನಿಯಾದಲ್ಲಿ ಸ್ಮಾಲ್ ಟ್ಯಾಟೂಗಳು ಫೇಮಸ್ ಆಗಿದೆ. ಕುತ್ತಿಗೆ ಹಿಂಭಾಗದಲ್ಲೊಂದು ಪುಟಾಣಿ ಸ್ಟಾರ್, ಕೈಯಲ್ಲೊಂದು ಮ್ಯೂಸಿಕ್ ಸಿಂಬಲ್, ಕಾಲಿನಲ್ಲಿ ಹಿಮ್ಮಡಿಯಲ್ಲಿ ಹಾರಾಡೋ ಹಕ್ಕಿಯ ಸಿಂಬಲ್, ಕೈಲ್ಲೊಂದು ಗರಿಯ ಚಿತ್ತಾರ... ಹೀಗೆ ಪುಟಾಣಿ ಟ್ಯಾಟೂಗಳು ಟ್ಯಾಟೂ ಪ್ರಿಯರ ಮೆಚ್ಚುಗೆ ಗಳಿಸಿದೆ.

ಸೆಮಿ ಕೋಲನ್ ಟ್ಯಾಟೂ ಕೂಡ ಫೇಮಸ್ ಆಗಿದ್ದು, ಎಷ್ಟೋಂದು ಪುಟಾಣಿ ಸೆಮಿಕೋಲನ್ ಹಾಕಿಕೊಳ್ಳೋ ಅದೆಷ್ಟು ಟ್ಯಾಟೂ ಪ್ರಿಯರಿದ್ದಾರೆ. ಅಷ್ಟೇ ಅಲ್ಲದೇ, ಪುಟಾಣಿ ಬಟರ್ ಫ್ಲೈ, ಚಿಕ್ಕದಾದ ಜೇನು ಹುಳ ಅಥವಾ ಕೀಟಗಳು, ಪ್ರಾಣಿಗಳು ಹೀಗೆ ವೆರೈಟಿ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ.

ಈ ಪುಟಾಣಿ ಟ್ಯಾಟೂಗಳ ಲಾಭಗಳು ಹೆಚ್ಚಿರುತ್ತದೆ. ಮೊದಲನೆಯದಾಗಿ, ಟ್ಯಾಟೂ ಹಾಕಿಸಿಕೊಳ್ಳುವಾಗ ಆಗೋ ನೋವು ಕಡಿಮೆ ಇರುತ್ತದೆ. ಬೆಲೆಯೂ ಕಡಿಮೆ, ಜೊತೆಗೆ ಬೇಕು ಎನಿಸಿದಾಗ ಆ ಟ್ಯಾಟೂವನ್ನು ಎಕ್ಸ್ ಟೆಂಡ್ ಮಾಡಿಸಿಕೊಳ್ಳುವ ಅವಕಾಶವೂ ಇರುತ್ತದೆ. ಹಾಗಾಗಿ ಇಂತಹ ಪುಟಾಣಿ ಟ್ಯಾಟೂ ಹಾಕಿಸಿಕೊಳ್ಳೋದಕ್ಕೆ ಹೆಚ್ಚಿನವರು ಆಸೆ ಪಡುತ್ತಾರೆ.

ಇನ್ನು ಐ ಲವ್ ಯೂ ಮಾರ್ಕ್, ಪುಟಾಣಿ ಹಾರ್ಟ್ ಸಿಂಬಲ್ ಬಿಡಿಸಿಕೊಳ್ಳುವುದೂ ಕೂಡ ಯುವಜನತೆಯ ಕ್ರೇಜ್ ಆಗಿದೆ. ಮೊದಲೆಲ್ಲಾ ದೊಡ್ಡ ದೊಡ್ಡ ಟ್ಯಾಟೂ ಹಾಕಿಸಿಕೊಂಡು ತಮ್ಮ ಟ್ಯಾಟೂ ಹೈಲೈಟ್ ಆಗ್ಬೇಕು ಅಂತ ಅಂದುಕೊಳ್ಳುತ್ತಿದ್ದವರು ಈಗ ಸ್ಮಾಲ್ ಟ್ಯಾಟೂವಿಗೆ ಫಿದಾ ಆಗುತ್ತಿದ್ದಾರೆ. ಒಮ್ಮೊಮ್ಮೆ ಕಾಣಬೇಕು. ಮತ್ತೊಮ್ಮೆ ಹೈಡ್ ಆಗಬೇಕು. ಹಾಗೇ ಟ್ಯಾಟೂ ಹಾಕಿಸಿಕೊಳ್ಳುವುದು ಈಗ ಟ್ಯಾಟೂ ಫಾರ್ಮುಲ ಆಗಿದೆ. ಬೆರಳಿನ ತುದಿಯಲ್ಲಿ, ಕಾಲಿನ ಹಿಮ್ಮಡಿಯಲ್ಲಿ ಈ ಟ್ಯಾಟೂಗಳು ಸೇರಿಕೊಳ್ಳುತ್ತಿವೆ.

ಮೊದಲೆಲ್ಲ ಸೆಲೆಬ್ರಿಟಿಗಳು ಟ್ಯಾಟೂ ಹಾಕಿಸಿಕೊಳ್ಳೋದು ದೊಡ್ಡ ಸುದ್ದಿಯಾಗುತಿತ್ತು. ಆ ಟ್ಯಾಟೂಗಳ ಫ್ಯಾಶನ್ ದುನಿಯಾದ ಟಾಕ್ ಆಫ್ ದಿ ಟೌನ್ ಆಗುತ್ತಿತ್ತು. ಈಗ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಪುಟಾಣಿ ಟ್ಯಾಟೂವಿನ ಮೊರೆ ಹೋಗುತ್ತಿದ್ದಾರೆ. ಅವರಿಂದ ಆರಂಭವಾದ ಈ ಟ್ರೆಂಡ್ ಪ್ರತಿಯೊಬ್ಬರಿಗೆ ಇಷ್ಟವಾಗಿದೆ ಎಂದರೆ ತಪ್ಪಲ್ಲ.

-ಮೈನಾಶ್ರೀ.ಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com