13 ದಿನಗಳಲ್ಲಿ ಜಗತ್ತಿನ ಏಳು ಅದ್ಭುತಗಳನ್ನು ವೀಕ್ಷಿಸುವ ಮೂಲಕ ಅರ್ಬುದದ ನೋವ ಮರೆತಳು!

ಈಕೆಯ ಹೆಸರು ಮೆಗಾನ್ ಸುಲ್ಲೀವನ್. ಅಪಘಾತ ಮತ್ತು ರೋಗಗಳು ಆಕೆಯ ಬದುಕನ್ನೇ ಬುಡಮೇಲು ಮಾಡತೊಡಗಿದಾಗ ಆಕೆ ಟ್ರಾವೆಲ್ ಬ್ಯಾಗ್ ಬೆನ್ನಿಗೇರಿಸಿ...
ಮೆಗಾನ್ ಸುಲ್ಲೀವನ್ (ಕೃಪೆ: ಇನ್ ಸ್ಟಾಗ್ರಾಂ)
ಮೆಗಾನ್ ಸುಲ್ಲೀವನ್ (ಕೃಪೆ: ಇನ್ ಸ್ಟಾಗ್ರಾಂ)
ಕ್ಯಾನ್ಸರ್ ಪೀಡಿತೆ ಎಂದು ಅರಿತಾಗ ಆಕೆ ಅಕ್ಷರಶಃ ಕುಗ್ಗಿ ಹೋದಳು. ಒಂದಷ್ಟು ದಿನ ಮಂಕಾಗಿ ಕುಳಿತಳು. ಆಗ ಕ್ಯಾನ್ಸರ್ ಬಾಧಿಸುವ ಮುನ್ನ ಇರುವ ಬದುಕಿಗಿಂತ ನಂತರದ ಬದುಕನ್ನು ಇನ್ನಷ್ಟು ಸುಂದರವಾಗಿಸಬೇಕೆಂಬ ಛಲ ಅವಳಲ್ಲಿ ಹುಟ್ಟಿಕೊಂಡಿತು.
ಈಕೆಯ ಹೆಸರು ಮೆಗಾನ್ ಸುಲ್ಲೀವನ್. ಅಪಘಾತ ಮತ್ತು ರೋಗಗಳು ಆಕೆಯ ಬದುಕನ್ನೇ ಬುಡಮೇಲು ಮಾಡತೊಡಗಿದಾಗ ಆಕೆ ಟ್ರಾವೆಲ್ ಬ್ಯಾಗ್ ಬೆನ್ನಿಗೇರಿಸಿ ಜಗತ್ತನ್ನು ಸುತ್ತಲು ತೀರ್ಮಾನಿಸಿಯೇ ಬಿಟ್ಟಳು. ಕಡಿಮೆ ಕಾಲಾವಧಿಯಲ್ಲಿ ಜಗತ್ತಿನ ಏಳು ಅದ್ಭುತಗಳನ್ನು ನೋಡಿ ಬಿಡಬೇಕೆಂಬುದು ಆಕೆಯ ಆಸೆಯಾಗಿತ್ತು.
ಕ್ಯಾಲಿಫೋರ್ನಿಯಾದ ಸೌತೀಲೇಕ್ ನಿವಾಸಿಯಾದ ಮೆಗಾನ್ ಆ ಆಸೆಯನ್ನು ಪೂರೈಸಿಯೇ ಬಿಟ್ಟಳು. ಹಾಗೆ 13 ದಿನಗಳಲ್ಲಿ ಜಗತ್ತಿನ ಏಳು ಅದ್ಭುತಗಳನ್ನು ನೋಡಿ ಕಣ್ತುಂಬಿಕೊಳ್ಳುವ ಮೂಲಕ ಮೆಗಾನ್ ಕ್ಯಾನ್ಸರ್ನ ನೋವನ್ನು ಮರೆತು ಬಿಟ್ಟಳು. 
ಹೀಗೆ ಏಳು ಅದ್ಭುತಗಳನ್ನು ನೋಡಿದ ನಂತರ ತನ್ನ ಪ್ರವಾಸ ಅನುಭವಗಳನ್ನೂ, ಫೋಟೋಗಳನ್ನು ಈಕೆ ವೆಬ್ಸೈಟ್, ಇನ್ಸ್ಟಾ ಗ್ರಾಂ, ಯುಟ್ಯೂಬ್ನಲ್ಲಿ ಶೇರ್ ಮಾಡಿದ್ದಾಳೆ.
ಅದೊಂದು ದಿನ ವಾಹನ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದಾಗಲೇ ಈಕೆಗೆ ಕ್ಯಾನ್ಸರ್ ರೋಗವಿರುವ ಬಗ್ಗೆ ಪತ್ತೆಯಾಗಿತ್ತು. ತನಗೆ ಕ್ಯಾನ್ಸರ್  ಇದೆ ಎಂದು ತಿಳಿದ ಕೂಡಲೇ  ಮೆಗಾನ್ ಮಂಕಾಗಿದ್ದರೂ, ಅನಂತರ ಚೇತರಿಸಿಕೊಂಡಳು. ಹಾಗೆ ದೇಶಗಳನ್ನು ಸುತ್ತುವುದಕ್ಕಾಗಿ ನಾಲ್ಕು ವರ್ಷಗಳ ಕಾಲ ಹಣ ಕೂಡಿಟ್ಟು, ಒಂದು ದಿನ ಗೆಳೆಯರ ಜತೆ ಸೇರಿ 13 ದಿನಗಳಲ್ಲಿ 12 ದೇಶಗಳನ್ನು ಸುತ್ತಿ ಏಳು ಅದ್ಭುತಗಳನ್ನು ಕಂಡು ಸಂತಸಪಟ್ಟಳು.
ಸಂಕಟ ಬಂದಾಗ ಅಳುತ್ತಾ ಕೂರದೆ ಎಲ್ಲವನ್ನೂ ದಿಟ್ಟತನದಿಂದ ನಿಭಾಯಿಸಿ, ಸಂತೋಷವನ್ನು ಕಂಡುಕೊಳ್ಳುವುದಕ್ಕೆ ಪ್ರೇರಣೆಯಾಗಿದ್ದಾಳೆ ಈ ಮೆಗಾನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com