
ವಾಷಿಂಗ್ಟನ್ ಡಿಸಿ: ಸಿಂಗಲ್ ಮದರ್ ಹುಡ್ ಎಂಬುದು ಇತ್ತೀಚೆಗೆ ಆಧುನಿಕ ಜೀವನದ ಅವಿಭಾಜ್ಯ ಅಂಗವಾಗಿದೆ. ಬರಿ ತಾಯಿಯ ಆರೈಕೆಯಲ್ಲಿ ಬೆಳೆದ ಮಗು ಸಮಾಜದಲ್ಲಿ ಉತ್ತಮವಾಗಿ ಹೊಂದಿಕೊಳ್ಳುತ್ತದೆ ಎಂದು ಆಧ್ಯಯನವೊಂದು ತಿಳಿಸಿದೆ.
ತಂದೆಯಿಲ್ಲದೇ ತಾಯಿಯ ಜೊತೆ ಬೆಳೆದ ಮಗು ಜೀವನದ ಬಗ್ಗೆ ಧನಾತ್ಮಕ ಭಾವನೆಗಳನ್ನು ಬೆಳೆಸಿಕೊಳ್ಳುತ್ತದೆ. ಜೊತೆಗೆ ತನ್ನ ತಂದೆ ಎಲ್ಲಿ, ಯಾಕೆ ಅವರು ತಮ್ಮ ಕುಟುಂಬದ ಜೊತೆ ಇಲ್ಲ ಎಂಬ ಪ್ರಶ್ನೆಗಳನ್ನು ಕೇಳುತ್ತದೆ ಎಂದು ಸಂಶೋಧಕರಾದ ಸೋಫಿ ಜದೇಹ್ ತಿಳಿಸಿದ್ದಾರೆ.
ಕೇವಲ ತಾಯಿಯ ಜೊತೆ ಬೆಳೆದ 51 ಮಕ್ಕಳನ್ನು ಭಿನ್ನಲಿಂಗೀಯ ಪೋಷಕರ ಜೊತೆ ಬೆಳೆದ ಮಕ್ಕಳೊಂದಿಗೆ ಸೇರಿಸಿ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ.
ಸಂಶೋಧನೆಯಲ್ಲಿ ಭಾಗವಹಿಸಿದ್ದ ಕುಟುಂಬಗಳ ಸದಸ್ಯಕ ವಯಸ್ಸು, ಲಿಂಗ, ಮಕ್ಕಳ ಗುರಿ, ಮತ್ತು ಜನಸಂಖ್ಯೆ ಹಾಗೂ ತಾಯಿಯ ಶಿಕ್ಷಣದ ಮಟ್ಟಗಳ ಜೊತೆ ಹೋಲಿಕೆ ಮಾಡಿ ಅಧ್ಯಯನ ನಡೆಸಲಾಯಿತು.
ಕೇವಲ ತಾಯಿಯ ಆಶ್ರಯದಲ್ಲಿ ಬೆಳೆದ ಮಗುವಿನ ಹೊಂದಾಣಿಕೆ, ದೃಷ್ಠಿಕೋನ, ತಾನು ತಂದೆಯಿಲ್ಲದೇ ಬೆಳೆಯುತ್ತಿದ್ದೇನೆ ಎಂದು ಅರ್ಥ ಮಾಡಿಕೊಳ್ಳುತ್ತದೆ. ಕುಟುಂಬದ ಜೊತೆ ಹಲವು ಸಾಮಾಜಿಕ ಅನುಭವಗಳನ್ನು ಪಡೆದುಕೊಳ್ಳುತ್ತದೆ ಎಂದು ಅಧ್ಯಯನ ತಿಳಿಸಿದೆ.
ಕೇವಲ ತಾಯಿ ಜೊತೆ ಬೆಳೆದ ಮಕ್ಕಳಿಗೆ, ತಂದೆಯ ಗೈರು, ಮಹತ್ವದ ವಿಷಯವಲ್ಲ, ಯಾವ ರೀತಿ ಉತ್ತಮ ಗುಣಮಟ್ಟದಲ್ಲಿ ಬೆಳೆಸಿದ್ದಾರೆ ಎಂಬುದೇ ಅಂತಿಮವಾಗಿ ಮುಖ್ಯವಾಗುತ್ತದೆ. ಪೋಷಕರ ಜೊತೆ ಮಕ್ಕಳ ಸಂಬಂಧ ಹೇಗೆ ಇರುತ್ತದೆ ಎಂಬುದಷ್ಟೇ ಮಹತ್ವ ಪಡೆದುಕೊಳ್ಳುತ್ತದೆ ಎಂಬು ಸಂಶೋಧನೆಯಿಂದ ತಿಳಿದು ಬಂದಿದೆ ಎಂದು ಸೋಫಿ ಜಹೇದ್ ತಿಳಿಸಿದ್ದಾರೆ.
ಈ ಅಧ್ಯಯನವನ್ನು ಯುರೋಪಿಯನ್ ಸಮಾಜದ ಮಾನವ ಸಂತಾನೋತ್ಪತ್ತಿ ಮತ್ತು ಭ್ರೂಣಶಾಸ್ತ್ರದ 32ನೇ ವಾರ್ಷಿಕ ಸಭೆಯಲ್ಲಿ ಪ್ರಸ್ತುತ ಪಡಿಸಲಾಯಿತು.
Advertisement