ಭಾರತೀಯ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ 18 ವರ್ಷಕ್ಕಿಂತ ಮುಂಚೆ ಮದುವೆಯಾಗುತ್ತಾರೆ: ವರದಿ

ವಿಶ್ವದ ಮೂವರಲ್ಲಿ ಒಂದು ಬಾಲ್ಯ ವಧು ಭಾರತೀಯಳಾಗಿದ್ದು, ನಮ್ಮ ದೇಶದ ಮಹಿಳೆಯರಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ವಿಶ್ವದ ಮೂವರಲ್ಲಿ ಒಂದು ಬಾಲ್ಯ ವಧು ಭಾರತೀಯಳಾಗಿದ್ದು, ನಮ್ಮ ದೇಶದ ಮಹಿಳೆಯರಲ್ಲಿ ಅರ್ಧದಷ್ಟು ಮಂದಿ 18 ವರ್ಷಕ್ಕಿಂತ ಮೊದಲು ಮದುವೆಯಾಗುತ್ತಾರೆ ಎಂದು ವಿಶ್ವಸಂಸ್ಥೆ ಜನಸಂಖ್ಯಾ ನಿಧಿಯ ಅಧ್ಯಯನದಿಂದ(ಯುಎನ್ಎಫ್ ಪಿಎ) ತಿಳಿದುಬಂದಿದೆ.
ಭಾರತದ ಒಟ್ಟು ಜನಸಂಖ್ಯೆಯಲ್ಲಿ 10ರಿಂದ 19 ವರ್ಷದೊಳಗಿನ ಹದಿಹರೆಯದವರು ಶೇಕಡಾ 21ರಷ್ಟಿದ್ದು, ಅವರಲ್ಲಿ ಹರೆಯದ ಯುವತಿಯರು ಶೇಕಡಾ 48ರಷ್ಟಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಇಂದು ಅಭಿವೃದ್ಧಿ, ಬದಲಾವಣೆಯಾದರೂ ಕೂಡ ಕೆಲವು ವಿಷಯಗಳು ಹದಿಹರೆಯದವರನ್ನು ಅದರಲ್ಲೂ ಹುಡುಗಿಯರಿಗೆ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿ ಸಾಧನೆ ಮಾಡಲು ಕಷ್ಟವಾಗುತ್ತಿದೆ ಎಂದು ಯುಎನ್ಎಫ್ ಪಿಎಯ ಪತ್ರಿಕಾ ಹೇಳಿಕೆ ತಿಳಿಸಿದೆ.
ಭಾರತದಲ್ಲಿ 15ರಿಂದ 19 ವರ್ಷದವರೆಗಿನ ಶೇಕಡಾ 14ರಷ್ಟು ಯುವತಿಯರು ಅವಿದ್ಯಾವಂತರಾಗಿದ್ದಾರೆ ಮತ್ತು ಶೇಕಡಾ 73ರಷ್ಟು ಹುಡುಗಿಯರು 10ನೇ ತರಗತಿಯಿಂದ ಮೇಲೆ ಕಾಲೇಜು ಮೆಟ್ಟಿಲು ಹತ್ತುವುದಿಲ್ಲ ಎಂದು ಹೇಳಿದೆ.
ವಿಶ್ವ ಜನಸಂಖ್ಯಾ ದಿನ ಇದೇ 11ರಂದು ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಜಾಗತಿಕ ಧ್ಯೇಯೋದ್ಧೇಶವಾಗಿ ಈ ವಿಷಯವನ್ನು ಹೇಳಲಾಗಿದೆ. ' Investing in Teenage Girls, especially relevant and important for India' ಎಂಬ ಘೋಷವಾಕ್ಯವನ್ನು ಈ ವರ್ಷದ ಜನಸಂಖ್ಯಾ ದಿನಾಚರಣೆ ಒಳಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com