
ಬೆಂಗಳೂರು: ಮಹಿಳೆಯರಿಗೆ ಕೂದಲು ತೆಗೆದುಕೊಳ್ಳಲು ಕ್ಷೌರ ಅತ್ಯುತ್ತಮ ಮಾರ್ಗ ಎಂದು ತಿಳಿಸಲು ನಟಿ ರಾಧಿಕಾ ಪಂಡಿತ್ ಮತ್ತು ತಜ್ಞೆ ರಶ್ಮಿ ಶೆಟ್ಟಿ ಮಂಗಳವಾರ ಒಟ್ಟಾಗಿ ಮುಂದೆ ಬಂದದ್ದು ವಿಶೇಷ.
ಜಿಲೆಟ್ ವೀನಸ್ ಆಯೋಜಿಸಿದ್ದ ಚರ್ಚೆಯಲ್ಲಿ ಈ ಈರ್ವರು, ಮಹಿಳಾ ಕ್ಷೌರದ ಹಿಂದಿರುವ ತಪ್ಪು ಅಭಿಪ್ರಾಯಗಳನ್ನು ತೊಲಗಿಸಲು ಪಾಲ್ಗೊಂಡಿದ್ದರು.
ರಾಧಿಕಾ ತಮ್ಮ ಸೌಂದರ್ಯದ ಗುಟ್ಟು ಬಿಚ್ಚಿಟ್ಟು "ಕೂದಲು ತೆಗೆದುಕೊಳ್ಳಲು ಕ್ಷೌರ ಅತ್ಯುತ್ತಮ ಮಾರ್ಗ ಎಂದು ನಂಬಿದ್ದೇನೆ. ಕ್ಷೌರದ ಸರಿಯಾದ ಮಾರ್ಗ ತಿಳಿದುಕೊಳ್ಳುವುದು ಮಹಿಳೆಯರಿಗೆ ಮುಖ್ಯ" ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ಕೂದಲನ್ನು ತೆಗೆದುಕೊಳ್ಳಲು ಶೇವಿಂಗ್ ಮಾರ್ಗವನ್ನು ತಜ್ಞರು ಶಿಪಾರಸ್ಸು ಮಾಡುತ್ತಾರೆ ಎಂದು ಶೆಟ್ಟಿ ಹೇಳಿದ್ದಾರೆ. "ಕ್ಷೌರ ಮಾಡುವುದರಿಂದ ಚರ್ಮ ಕಪ್ಪಾಗುತ್ತದೆ ಮತ್ತು ಕೂದಲು ದಟ್ಟವಾಗುತ್ತದೆ ಎಂಬುದು ತಪ್ಪು. ಕೂದಲು ಬೆಳೆಯಲು ಕಾರಣ ಆನುವಂಶಿಕ ಮತ್ತು ಹಾರ್ಮೋನ್ ಗಳಿಗೆ ಸಂಬಂಧಪಟ್ಟಿದ್ದು. ಯಾವ ವಿಧದಲ್ಲಿ ಕೂದಲು ತೆಗೆದುಕೊಳ್ಳುತ್ತೀರಿ ಎಂಬುದರ ಮೇಲೆ ಅವಲಂಬಿತವಾಗುವುದಿಲ್ಲ" ಎಂದು ಅವರು ತಿಳಿಸಿದ್ದಾರೆ.
Advertisement