ಚುಚ್ಚುಮದ್ದು ರೀತಿಯಲ್ಲಿ ತಾಯಿಯ ಹಾಲು ಮಗುವಿಗೆ ಸಹಾಯ ಮಾಡುತ್ತದೆ: ಅಧ್ಯಯನ

ಎದೆಹಾಲು ಉಣಿಸುವುದು ತಾಯಿಯು ತನ್ನ ಮಗುವಿಗೆ ನೀಡಬಹುದಾದ ಅತ್ಯಂತ ಉತ್ತಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಎದೆಹಾಲು ಉಣಿಸುವುದು ತಾಯಿಯು ತನ್ನ ಮಗುವಿಗೆ ನೀಡಬಹುದಾದ ಅತ್ಯಂತ ಉತ್ತಮ ಗಿಫ್ಟ್. ಇದರಲ್ಲಿ ಪೋಷಕಾಂಶಗಳು, ಮಗುವಿನ ದೇಹ ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಬಹುದಾದ ಪ್ರತಿಕಾಯಗಳು ಇರುತ್ತವೆ. ಇಷ್ಟೇ ಅಲ್ಲದೆ ಮಗುವಿನ ಹಾಲುಣಿಸುವುದರಿಂದ ಇನ್ನೂ ಕೆಲವು ಪ್ರಯೋಜನಗಳಿವೆ.
ಈ ಬಗ್ಗೆ ನಡೆಸಲಾದ ಅಧ್ಯಯನವೊಂದರ ಪ್ರಕಾರ ತಾಯಿಯ ಎದೆಹಾಲಿನಿಂದ ಮಕ್ಕಳು ಟಿಬಿಯಂತಹ ಕಾಯಿಲೆಗಳ ವಿರುದ್ಧ ಹೋರಾಡಬಹುದು. ಚುಚ್ಚುಮದ್ದಿನ ರೀತಿಯಲ್ಲಿ ಇದು ಕೆಲಸ ಮಾಡುತ್ತದಂತೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಪ್ರೊಫೆಸರ್ ಅಮೈ ವಾಕರ್, ಕೆಲವು ಚುಚ್ಚುಮದ್ದುಗಳು ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ, ಇನ್ನು ಕೆಲವು ನವಜಾತ ಶಿಶುಗಳ ಮೇಲೆ ಕೆಲಸ ಮಾಡುವುದಿಲ್ಲ. ಅದರ ಬದಲು ಮಹಿಳೆಯರು ಗರ್ಭ ಧರಿಸುವ ಮುನ್ನ ಚುಚ್ಚುಮದ್ದು ಹಾಕಿಸಿಕೊಂಡರೆ ಅದು ಪ್ರತಿರಕ್ಷಕ ಜೀವಕೋಶಗಳನ್ನು ವರ್ಗಾಯಿಸಿ ಮಹಿಳೆಯರು ಎದೆ ಹಾಲುಣಿಸುವ ಸಂದರ್ಭದಲ್ಲಿ ಮಗುವಿಗೆ ವರ್ಗಾವಣೆಯಾಗುತ್ತದೆ ಎನ್ನುತ್ತಾರೆ ವಾಕರ್.
ಇಮ್ಯುನೋಲಜಿ ಎಂಬ ವೃತ್ತ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು, ಮಗುವಿನಲ್ಲಿ ರೋಗನಿರೋಧಕ ಶಕ್ತಿಯನ್ನು ತಾಯಿಯ ಹಾಲು ನೀಡುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com