೫೪ ಸಾವಿರ ಎಕರೆಗಳಿಗೆ ಹಬ್ಬಿದ ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು

ಅಮೇರಿಕಾ ರಾಜ್ಯ ಕ್ಯಾಲಿಫೋರ್ನಿಯಾದ ದೈತ್ಯ ಕಾಳ್ಗಿಚ್ಚು ೫೪ ಸಾವಿರ ಎಕರೆಗಳಷ್ಟು ಜಾಗಕ್ಕೆ ಹಬ್ಬಿದೆ ಎಂದು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.
ಕಾಳ್ಗಿಚ್ಚು ನಂದಿಸಲು ಶ್ರಮಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ
ಕಾಳ್ಗಿಚ್ಚು ನಂದಿಸಲು ಶ್ರಮಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ

ಲಾಸೇಂಜಲೀಸ್: ಅಮೇರಿಕಾ ರಾಜ್ಯ ಕ್ಯಾಲಿಫೋರ್ನಿಯಾದ ದೈತ್ಯ ಕಾಳ್ಗಿಚ್ಚು ೫೪ ಸಾವಿರ ಎಕರೆಗಳಷ್ಟು ಜಾಗಕ್ಕೆ ಹಬ್ಬಿದೆ ಎಂದು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.

ಇಲ್ಲಿಯವರೆಗೂ ಯಾವುದೇ ಸಾವು ನೋವಿನ ವರಿಯಾಗಿಲ್ಲ. ಆದರೆ ೧೨ ಸಾವಿರಕ್ಕೂ ಹೆಚ್ಚು ಜನರಿಗೆ ಸ್ಥಳಾಂತರಗೊಳ್ಳಲು ಸೂಚಿಸಿದ್ದು, ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ಮುಚ್ಚಲಾಗಿದೆ ಎಂದು ಎನ್ ಬಿ ಸಿ ನ್ಯೂಸ್ ವರದಿ ಮಾಡಿದೆ.

ಹತ್ತಾರು ಕಟ್ಟಡಗಳು, ಇಪ್ಪತ್ತಕ್ಕೂ ಹೆಚ್ಚು ಮನೆಗಳು ಈ ಕಾಳ್ಗಿಚ್ಚಿನಿಂದ ಧ್ವಂಸವಾಗಿದ್ದು ೬೦೦೦ಕ್ಕು ಹೆಚ್ಚು ಮನೆಗಳು ಕಾಳ್ಗಿಚ್ಚಿಗೆ ಬಲಿಯಾಗುವ ಭೀತಿಯನ್ನು ಎದುರಿಸುತ್ತಿವೆ.

೨೦೦೦ ಕ್ಕೂ ಹೆಚ್ಚು ಅಗ್ನಿಶಾಮಕ ದಳಗಳು ಕಾಳ್ಗಿಚ್ಚಿನ ನಿಯಂತ್ರಣಕ್ಕೆ ಹೋರಾಡುತ್ತಿದ್ದು 6000 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಇದಕ್ಕೆ ನಿಯೋಜಿಸಲಾಗುಇದೆ. ಈ ಕಾಳ್ಗಿಚ್ಚು ಸ್ಯಾಂಡಿಯಾಗೋ ದಿಂದ ಆರೆಗಾನ್ ಗಡಿಯವರೆಗೂ ಹರಡಿದೆ ಎಂದು ತಿಳಿದುಬಂದಿದೆ.

ಇದನ್ನು ತುರ್ತು ಪರಿಸ್ಥಿತಿ ಎಂದು ಕ್ಯಾಲಿಫೋರ್ನಿಯಾ ಗವರ್ನರ್ ಘೋಷಿಸಿದ್ದು, ಈ ದುರಂತಕ್ಕೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ಪರಿಹಾರ ದಳಗಳನ್ನು ನಿಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com