ರೀಯೂನಿಯನ್ ದ್ವೀಪದಲ್ಲಿ ಪತ್ತೆಯಾದ ಅವಶೇಷ ಮಲೇಷ್ಯಾ ವಿಮಾನದ್ದು: ಮಲೇಷ್ಯಾ ಪ್ರಧಾನಿ

ಕಳೆದ ವಾರ ಹಿಂದೂ ಮಹಾಸಾಗರದ ರೀಯೂನಿಯನ್ ದ್ವೀಪದಲ್ಲಿ ಪತ್ತೆಯಾದ ಅವಶೇಷ ಎಂಎಚ್ -370 ಮಲೇಷ್ಯಾ ವಿಮಾನದ್ದು ಎಂದು ದೃಢಪಟ್ಟಿದೆ.
ನಜೀಬ್ ರಜಾಕ್
ನಜೀಬ್ ರಜಾಕ್
Updated on

ಕೌಲಲಂಪುರ: ಕಳೆದ ವಾರ ಹಿಂದೂ ಮಹಾಸಾಗರದ ರೀಯೂನಿಯನ್ ದ್ವೀಪದಲ್ಲಿ ಪತ್ತೆಯಾದ ಅವಶೇಷ ಎಂಎಚ್ -370 ಮಲೇಷ್ಯಾ ವಿಮಾನದ್ದು ಎಂದು ದೃಢಪಟ್ಟಿದೆ.

ಮಲೇಷ್ಯಾ ಪ್ರಧಾನಿ ನಜೀಬ್ ರಜಾಕ್ ಅವರು, ಈಗ ಪತ್ತೆಯಾಗಿರುವ ಅವಶೇಷ ನಾಪತ್ತೆಯಾಗಿದ್ದ ಎಂ.ಎಚ್ 370 ವಿಮಾನದ ರೆಕ್ಕೆಯ ಭಾಗವೇ ಎಂದು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿರುವ ಅಂತಾರಾಷ್ಟ್ರೀಯ ತಜ್ಞರಿಂದ ಈ ಅವಶೇಷ ಪರೀಕ್ಷಿಸಲ್ಪಟ್ಟಿದ್ದು, ಅವರು ನೀಡಿದ ವರದಿಯಿಂದಾಗಿ ಇದು ದೃಢಪಟ್ಟಿರುವುದಾಗಿ ಮಲೇಷ್ಯಾ ಪ್ರಧಾನಿ ತಿಳಿಸಿದ್ದಾರೆ.

2014 ಮಾರ್ಚ್ ತಿಂಗಳಲ್ಲಿ 239 ಪ್ರಯಾಣಿಕರನ್ನು ಹೊತ್ತು ಕೌಲಲಂಪುರದಿಂದ ಬೀಜಿಂಗ್‌ಗೆ ಹೊರಟಿದ್ದ ಮಲೇಷ್ಯಾದ ಈ ವಿಮಾನ ನಿಗೂಢವಾಗಿ ನಾಪತ್ತೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com