ಹಿರೋಶಿಮಾ, ನಾಗಸಾಕಿ ಮೇಲೆ ಅಣು ಬಾಂಬ್ ಪ್ರಯೋಗಿಸಿ ಇಂದಿಗೆ 70 ವರ್ಷ

ಜಪಾನ್ ನ ಹಿರೋಶಿಮಾ ನಾಗಸಾಕಿ ಮೇಲೆ ಅಮೇರಿಕ ಅಣು ಬಾಂಬ್ ಹಾಕಿದ ಕರಾಳ ಘಟನೆಗೆ ಇಂದಿಗೆ 70 ವರ್ಷ.
ಅಣು ಬಾಂಬ್ ದಾಳಿಯಿಂದ ಸಂಪೂರ್ಣ ನಾಶವಾಗಿದ್ದ ಹಿರೋಶಿಮಾ ನಗರ(ಸಂಗ್ರಹ ಚಿತ್ರ)
ಅಣು ಬಾಂಬ್ ದಾಳಿಯಿಂದ ಸಂಪೂರ್ಣ ನಾಶವಾಗಿದ್ದ ಹಿರೋಶಿಮಾ ನಗರ(ಸಂಗ್ರಹ ಚಿತ್ರ)
Updated on

ಟೋಕಿಯೋ: ಜಪಾನ್ ನ ಹಿರೋಶಿಮಾ ನಾಗಸಾಕಿ ಮೇಲೆ ಅಮೇರಿಕ ಅಣು ಬಾಂಬ್ ಹಾಕಿದ ಕರಾಳ ಘಟನೆಗೆ ಇಂದಿಗೆ 70 ವರ್ಷ. 1945 ರ ಅಗಸ್ಟ್ 6 ರಂದು ಅಮೇರಿಕಾ ಹಿರೋಶಿಮಾ ನಗರದ ಮೇಲೆ ಅಣು ಬಾಂಬ್ ಪ್ರಯೋಗ ಮಾಡಿತ್ತು.

ಈ ಕರಾಳ ಘಟನೆಯನ್ನು ಹಿರೋಶಿಮಾ ನಗರದ ಜನತೆ ನೆನಪಿಸಿಕೊಂಡಿದ್ದು, ಬಾಂಬ್ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಎರಡು ನಿಮಿಷ ಮೌನಾಚರಣೆ ಮಾಡಿದ್ದಾರೆ ಎಂದು ಜಪಾನ್ ನ ಎನ್.ಹೆಚ್.ಕೆ ಸುದ್ದಿ ಸಂಸ್ಥೆ ವರದಿ ಮಾಡಿದೆ. 2 ನೇ ವಿಶ್ವಯುದ್ಧದ ಅಂತಿಮ ಹಂತದ ಸಂದರ್ಭದಲ್ಲಿ ಅಮೇರಿಕಾ ಆಗಸ್ಟ್ 6  ರಂದು ಹಿರೋಶಿಮಾ ನಗರದ ಮೇಲೆ ಬಾಂಬ್ ಹಾಕಿತ್ತು. ಇದಾದ ಮೂರು ದಿನಗಳ ಬಳಿಕ ನಾಗಸಾಕಿ ಪ್ರದೇಶದ ಮೇಲೆ ಬಾಂಬ್ ಹಾಕಲಾಗಿತ್ತು.  ಈ ಘಟನೆಯಲ್ಲಿ ಕನಿಷ್ಠ 140,000 ಜನ ಸಾವನ್ನಪ್ಪಿದ್ದರು.

ಹಿರೋಶಿಮಾ ಘಟನೆ ಸ್ಮರಣಾರ್ಥ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ, ಹಿರೋಶಿಮಾ ಮೇಯರ್ ಮಾಟ್ಸುಯ್ಸ್ ಹಾಗೂ ಬಾಂಬ್ ದಾಳಿಯಲ್ಲಿ ಬದುಕುಳಿದಿದ್ದ ಕೆಲವರು ಸರಿದಂತೆ ಒಟ್ಟು 55,000 ಜನ ಭಾಗವಹಿಸಿದ್ದರು.
ಅಣ್ವಸ್ತ್ರ ವಿಲ್ಲದೇ ವಿಶ್ವವನ್ನು ತಲುಪುವ ನಿಟ್ಟಿನಲ್ಲಿ ಅಣ್ವಸ್ತ್ರ ರಾಷ್ಟ್ರಗಳು ಹಾಗೂ ಅಣ್ವಸ್ತ್ರ ಹೊಂದದ ರಾಷ್ಟ್ರಗಳಿಂದ ಹೆಚ್ಚು ಬೆಂಬಲ ನಿರೀಕ್ಷಿಸುತ್ತೇವೆ ಎಂದು ಜಪಾನ್ ಪ್ರಧಾನಿ ಶಿಂಜೋ ಅಬೆ ಹೇಳಿದ್ದಾರೆ. ವಿಶ್ವಾದ್ಯಂತ ಅಣ್ವಸ್ತ್ರಗಳನ್ನು ನಿಷೇಧಿಸಲು ವಿಶ್ವ ಸಂಸ್ಥೆಯಲ್ಲಿ ಜಪಾನ್ ನಿರ್ಣಯ ಮಂದಿಸುವುದರ ಹಿನ್ನೆಲೆಯಲ್ಲಿ ಅಬೆ ಈ ಹೇಳಿಕೆ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com