ಫೋರ್ಬ್ಸ್ ಪಟ್ಟಿಯ ಮೊದಲ 20 ಸ್ಥಾನದಲ್ಲಿ ಇಬ್ಬರು ಭಾರತೀಯರು

ಜಗತ್ತಿನ ಅತ್ಯಂತ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಹಾಗೂ ಎಚ್ ಸಿಎಲ್ ಸಂಸ್ಥಾಪಕ ಶಿವ ನಡಾರ್ ಸ್ಥಾನ ಪಡೆದಿದ್ದಾರೆ. ..
ಅಜೀಂ ಪ್ರೇಮ್ ಜಿ ಮತ್ತು ಶಿವ ನಡಾರ್
ಅಜೀಂ ಪ್ರೇಮ್ ಜಿ ಮತ್ತು ಶಿವ ನಡಾರ್

ನ್ಯೂಯಾರ್ಕ್: ಜಗತ್ತಿನ ಅತ್ಯಂತ ಶ್ರೀಮಂತರ ಫೋರ್ಬ್ಸ್ ಪಟ್ಟಿಯಲ್ಲಿ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ ಹಾಗೂ ಎಚ್ ಸಿಎಲ್ ಸಂಸ್ಥಾಪಕ ಶಿವ ನಡಾರ್ ಸ್ಥಾನ ಪಡೆದಿದ್ದಾರೆ. ಮೈಕ್ರೋಸಾಪ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಮೊದಲ ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್ ಪಟ್ಟಿಯಲ್ಲಿ ಅಜೀಂ ಪ್ರೇಮ್ ಜಿ ಮೊದಲ 100 ತಂತ್ರಜ್ಞಾನ ಕ್ಷೇತ್ರದಲ್ಲಿ 13 ನೇ ಹಾಗೂ ಶಿವನಡಾರ್ 14ನೇ ರ್ಯಾಂಕ್ ಪಡೆದಿದ್ದಾರೆ.

ಭಾರತೀಯ ಮೂಲದ ರೊಮೇಶ್ ವಾದ್ವಾನಿ ಮತ್ತು ಭರತ್ ದೇಸಾಯಿ ಹೆಸರುಗಳು ಕೂಡ ಪಟ್ಟಿಯಲ್ಲಿವೆ. 17. 4 ಯುಎಸ್ಡಿ ಬಿಲಿಯನ್ ಹಣ ಹೊಂದಿರುವ ಅಜೀಂ ಪ್ರೇಮ್ ಜಿ ಏಷ್ಯಾ ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ದೊಡ್ಡ ಶ್ರೀಮಂತರು ಎಂದು ಹೆಗ್ಗಳಿಕೆ ಪಡೆದಿದ್ದಾರೆ ಎಂದು ಫೋರ್ಬ್ಸ್ ತಿಳಿಸಿದೆ. ಎಚ್ ಸಿಎಲ್ ಸಂಸ್ಥಾಪರ ಶಿವ ನಡಾರ್ 14.4 ಬಿಲಿಯನ್ ಹಣ ಹೊಂದಿರುವ ಮತ್ತೊಬ್ಬ ಶ್ರೀಮಂತ ವ್ಯಕ್ತಿಯಾಗಿದ್ದಾರೆ, ರೊಮೇಶ್ ವಾದ್ವಾನಿ 73ನೇ ರ್ಯಾಂಕ್ ಪಡೆದಿದ್ದಾರೆ.

ದೇಸಾಯ್ ಫ್ಯಾಮಿಲಿ ಫೋರ್ಬ್ಸ್ ಪಟ್ಟಿಯಲ್ಲಿ 82 ನೇ ರ್ಯಾಂಕ್ ಪಡೆದಿದ್ದಾರೆ.ಇನ್ನು ಅಮೆರಿಕಾದ ಬಿಲಿಯನೇರ್ ಗಳು 51 ಸ್ಥಾನ ಗಳಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com