
ಇಸ್ಲಾಮಾಬಾದ್: ಭಯೋತ್ಪಾದಕ ಹಫೀದ್ ಸಯೀದ್ ನ ಜಮಾತ್-ಉದ್- ದವಾ(ಜೆಯುಡಿ) ಉಗ್ರ ಸಂಘಟನೆಯನ್ನು ಶಂಕಿತ ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಅಲ್ಲಿನ ಸಂಸತ್ ಗೆ ತಿಳಿಸಿದೆ.
ನಿಷೇಧಿತ ಗುಂಪುಗಳನ್ನು ನಿಯಂತ್ರಿಸುವಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಪಾತ್ರದ ಬಗ್ಗೆ ಪಾಕ್ ನ ಸಂಸತ್ ನಲ್ಲಿ ನಡೆದ ಚರ್ಚೆ ವೇಳೆ ಪಾಕಿಸ್ತಾನ ಸರ್ಕಾರ ಜೆಯುಡಿ ಸಂಘಟನೆಯನ್ನು ಶಂಕಿತರ ಪಟ್ಟಿಗೆ ಸೇರಿಸಿರುವುದಾಗಿ ತಿಳಿಸಿದೆ. 2008 ರ ನವೆಂಬರ್ 26 ರಂದು ಮುಂಬೈ ನಲ್ಲಿ ನಡೆದಿದ್ದ ಉಗ್ರ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತ ಸರ್ಕಾರ ಪಾಕಿಸ್ತಾನಕ್ಕೆ ಅನೇಕ ಬಾರಿ ಒತ್ತಾಯಿಸಿತ್ತು.
ಜೆಯುಡಿಯನ್ನು ಶಂಕಿತ ಉಗ್ರ ಸಂಘಟನೆ ಪಟ್ಟಿಗೆ ಸೇರಿಸಲಾಗಿದ್ದು, ಭಯೋತ್ಪಾದಕ ಸಂಘಟನೆ ಎಂಬುದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ. ಹಫೀದ್ ಸಯೀದ್ ಸಂಘಟನೆಯ ಚಟುವಟಿಕೆಗಳನ್ನು ಪಾಕಿಸ್ತಾನ ಗಮನಿಸುತ್ತಿರುವುದಾಗಿ ಪಾಕಿಸ್ತಾನ ಸಚಿವ ರೆಹಮಾನ್ ಹೇಳಿದ್ದಾರೆ.
Advertisement